ಮದುವೆ ಮಂಟಪದಿಂದ ಸಿನೆಮಾ ‌ಮಂದಿರ - ಮದುವೆ ಪೋಷಾಕಿನಲ್ಲಿ ತುಳು ಸಿನಿಮಾ ವೀಕ್ಷಿಸಿದ ನೂತನ ವಧುವರರು
Thumbnail
ಉಡುಪಿ : ಮದುವೆ ಶಾಸ್ತ್ರ ಮುಗಿದ ಬಳಿಕ ಸಭಾಂಗಣದಿಂದ ಪೇಟ, ಬಾಸಿಂಗ, ಹಾರ ಸಹಿತ ಕೈ ಕೈ ಹಿಡಿದು ನೂತನ ವಧುವರ ಮತ್ತು ಅವರ ಗೆಳೆಯರು ಮಣಿಪಾಲದಲ್ಲಿ ಸಿನಿಮಾ ಮಂದಿರಕ್ಕೆ ತೆರಳಿ ತುಳು ಚಿತ್ರ ನೋಡಿ ಸಿನಿಮಾದ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸಿದರು. ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಮತ್ತು ತುಳು ಸಿನಿಮಾ ರಂಗದ ಯುವ ಸಿನಿಮಾಟೋಗ್ರಾಫರ್ ಭುವನೇಶ್ ಪ್ರಭು ಮಂಟಪದಿಂದ ನೇರವಾಗಿ ಮಣಿಪಾಲದ ಸಿನಿಮಾ ಮಂದಿರಕ್ಕೆ ತೆರಳಿ ರಾಜ್ ಸೌಂಡ್ ಆ್ಯಂಡ್ ಲೈಟ್ಸ್ ಸಿನಿಮಾ ವೀಕ್ಷಿಸಿದರು. ಚಿತ್ರತಂಡದಿಂದ ನೂತನ ವಧುವರು ಮತ್ತೊಮ್ಮೆ ಹಾರ ಬದಲಾಯಿಸಿ, ಕೇಕ್ ಕತ್ತರಿಸಿ, ಶುಭ ಹಾರೈಸಿದರು. ಈ ಸಂದರ್ಭ ವಧು ವರರ ಸಂಬಂಧಿಕರು, ಗೆಳೆಯರು ಜೊತೆಯಲ್ಲಿದ್ದರು.
28 May 2022, 07:23 PM
Category: Kaup
Tags: