ತಾಳಮದ್ದಳೆ ಸಪ್ತಾಹ : ಕೆ.ಎಲ್.ಕುಂಡಂತಾಯರಿಗೆ "ಪೆರ್ಲ ಕೃಷ್ಣ ಭಟ್ ಪ್ರಶಸ್ತಿ" ಪ್ರದಾನ
Thumbnail
ಉಡುಪಿ : ಇಲ್ಲಿಯ ಯಕ್ಷಗಾನ ಕಲಾಕೇಂದ್ರ (ರಿ) ಇವರು ಪರ್ಯಾಯ ಕೃಷ್ಣಾಪುರ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ನಡೆಸಿದ ತಾಳಮದ್ದಳೆ ಸಪ್ತಾಹ - 2022 ರ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಜಾನಪದ ವಿದ್ವಾಂಸ , ಯಕ್ಷಗಾನ ವೇಷಧಾರಿ - ಅರ್ಥಧಾರಿ ಕೆ.ಎಲ್.ಕುಂಡಂತಾಯರಿಗೆ ಪಂಡಿತ ಪರಂಪರೆಯ ವಿದ್ವಾಂಸ ಪೆರ್ಲ ಕೃಷ್ಣ ಭಟ್ ನೆನಪಿನ "ಪೆರ್ಲ ಕೃಷ್ಣ ಭಟ್ ಪ್ರಶಸ್ತಿ"ಯನ್ನು ಪ್ರದಾನಿಸಿದರು. ಕರ್ಣಾಟಕ ಬ್ಯಾಂಕಿನ ಮಹಾಪ್ರಬಂಧಕ ರಾಜಕುಮಾರ್ ಪಿ.ಎಚ್., ಹೊನ್ನಾವರದ ಉದ್ಯಮಿ ಕೃಷ್ಣಮೂರ್ತಿ ಭಟ್ ಶಿವಾನಿ ಹಾಗೂ ಕಲಾರಂಗದ ಅಧ್ಯಕ್ಷ ಎಂ‌.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಎಸ್.ವಿ.ಭಟ್ ಮತ್ತಿತರರು ಉಪಸ್ಥಿತರಿದ್ದರು.
29 May 2022, 08:22 PM
Category: Kaup
Tags: