ಪಡುಬಿದ್ರಿ ರೋಟರಿ ಕ್ಲಬ್ ಗೆ ಗವರ್ನರ್ ಭೇಟಿ - ವಿವಿಧ ಸಮಾಜಮುಖಿ ಕಾರ್ಯಗಳ ಉದ್ಘಾಟನೆ
ಪಡುಬಿದ್ರಿ : ಇಲ್ಲಿನ ರೋಟರಿ ಕ್ಲಬ್ ಗೆ ಗವರ್ನರ್ ಭೇಟಿ ನೀಡಿ ವಿವಿಧ ಸಮಾಜಮುಖಿ ಕಾರ್ಯಗಳನ್ನು ಉದ್ಘಾಟಿಸಿದರು.
ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಾಮಫಲಕ , ದಾರಿ ಸೂಚಕ ನಾಮಫಲಕ , ಅಂಗನವಾಡಿ ಕೇಂದ್ರ ಪಡುಬಿದ್ರಿ ಪುನರ್ ಪೈಂಟಿಂಗ್, ವಿಶ್ವ ಪರಿಸರ ದಿನಾಚರಣೆ, ಬ್ಲೂ ಫ್ಲಾಗ್ ಬೀಚಿನಲ್ಲಿ ನಾಮಫಲಕದ ಅನಾವರಣಗೊಳಿಸಲಾಯಿತು.
ರೋಟೇರಿಯನ್ ಪಿಎಚ್ಎಫ್ ಎಂಜಿ ರಾಮಚಂದ್ರಮೂರ್ತಿ ಡಿಸ್ಟ್ರಿಕ್ ಗವರ್ನರ್ ಮಾತನಾಡಿ ಪಡುಬಿದ್ರಿ ರೋಟರಿ ಕ್ಲಬ್ ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪಡುಬಿದ್ರಿ ರೋಟರಿ ಕ್ಲಬ್ ಜನಸೇವೆ ಮಾಡುತ್ತಾ ಮನೆಮಾತಾಗಿದ್ದಾರೆ ಇದನ್ನು ಮುಂದುವರಿಸಿಕೊಂಡು ಬರಬೇಕಾಗಿ ಕೇಳಿಕೊಂಡರು.
ಅಸಿಸ್ಟೆಂಟ್ ಗವರ್ನರ್ ಆದ ರೋಟೇರಿಯನ್ ಪಿಎಚ್ಎಫ್ ಡಾ.ಅರುಣ್ ಹೆಗ್ಗಡೆಯವರು ಸ್ಪಂದನ ಗ್ರಹ ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿ ತರುಣರ ಕ್ಲಬ್ ಪಡುಬಿದ್ರಿ ರೋಟರಿ ಶಿಸ್ತಿನ ಕ್ಲಬ್ ಎಂದು ಕೊಂಡಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ವಲಯ ಸೇನಾನಿ ಅನಿಲ್ ಡೆಸ ಶುಭಾಶಯ ಕೋರಿದರು.
ಸಾರ್ವಜನಿಕ ಸಮಾರಂಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಮೊಹಮ್ಮದ್ ನಿಯಾಜ್ ಅಧ್ಯಕ್ಷತೆವಹಿಸಿಕೊಂಡರು.
ಸುಧಾಕರ್ ಕೆ ಹಾಗೂ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಬಿ ಎಸ್ ಆಚಾರ್ಯ ವರದಿ ವಾಚಿಸಿ, ವಂದಿಸಿದರು.
