ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಅಧ್ಯಕ್ಷರಾಗಿ ಅನಿಲ್ ಲೋಬೊ ಆಯ್ಕೆ
Thumbnail
ಉದ್ಯಾವರ : ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ತನ್ನದೇ ಅದ ಛಾಪನ್ನು ಮೂಡಿಸಿರುವ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ 2022-23ರ ಸಾಲಿನ ನೂತನ ಅಧ್ಯಕ್ಷರಾಗಿ ಅನಿಲ್ ಲೋಬೊ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ನಡೆದ ಮಾಸಿಕ ಸಭೆಯಲ್ಲಿ ನೂತನ ಸಾಲಿನ ಕಾರ್ಯಕಾರಿ ಸಮಿತಿಯ ಚುನಾವಣೆ ನಡೆದಿದ್ದು ಕಾರ್ಯದರ್ಶಿಯಾಗಿ ಸ್ಟೀವನ್ ಕುಲಾಸೊ ಮತ್ತು ಕೋಶಾಧಿಕಾರಿಯಾಗಿ ರೋಶನ್ ಕ್ರಾಸ್ತಾ ಆಯ್ಕೆಯಾಗಿದ್ದಾರೆ. ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಜುಲೈ 2 ರಂದು ಶನಿವಾರ ಸಂಜೆ ಉದ್ಯಾವರದ ಝೇವಿಯರ್ ಸಭಾಭವನದಲ್ಲಿ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಪ್ರಕಟಣೆ ತಿಳಿಸಿದೆ.
21 Jun 2022, 10:40 AM
Category: Kaup
Tags: