ರೋಟರಿ ಶಂಕರಪುರ 2022-23ನೇ ಸಾಲಿನ ಪದಗ್ರಹಣ
ಕಟಪಾಡಿ : ರೋಟರಿ ಜಿಲ್ಲೆ 3182 ವಲಯ 5ರ ರೋಟರಿ ಶಂಕರಪುರ 2022-23ನೇ ಸಾಲಿನ ಪದಗ್ರಹಣವು ರೋಟರಿ ಶತಾಬ್ದಿ ಭವನದಲ್ಲಿ ಜೂ.28ರಂದು ಜರಗಿತು. ರೋಟರಿ ಜಿಲ್ಲಾ ಗವರ್ನರ್ ರೊ|ಡಾ| ಜಯಗೌರಿ ಹಡಿಗಾಲ್ ಪದಗ್ರಹಣ ನೆರವೇರಿಸಿ ಶುಭ ಕೋರಿದರು.
ಅಧಿಕಾರ ಹಸ್ತಾಂತರ : 2021-22 ಸಾಲಿನ ಅಧ್ಯಕ್ಷರಾದ ಫ್ಲಾವಿಯ ಮಿನೇಝಸ್ ನೂತನ ಅಧ್ಯಕ್ಷರಾದ ರೊ|ಗ್ಲಾಡ್ಸನ್ ಕುಂದರ್ ರಿಗೆ ಮತ್ತು 2021-22 ಸಾಲಿನ ಕಾರ್ಯದರ್ಶಿ ಮಾಲಿನಿ ಶೆಟ್ಟಿ
ನೂತನ ಕಾರ್ಯದರ್ಶಿ ರೊಸಿಲ್ವಿಯಾ ಕ್ಯಾಸ್ತಲಿನೋ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಹಲವು ಜಿಲ್ಲಾ ಸಮ್ಮೇಳನಗಳಲ್ಲಿ ಅಸಂಖ್ಯ ಪ್ರಶಸ್ತಿ, ಮನ್ನಣೆಗಳನ್ನು ಪಡೆದಿದ್ದು, ಸರ್ವರ ಸಹಕಾರ, ಸಹಯೋಗದೊಡನೆ ಇನ್ನಷ್ಟು ಉತ್ತುಂಗಕ್ಕೇರಿಸುವ ಅಭಿಲಾಷೆಯನ್ನು ನೂತನ ಅಧ್ಯಕ್ಷರೊಗ್ಲಾಡನ್ ಕುಂದರ್ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ರೊ|
ಡಾ| ಶಶಿಕಾಂತ ಕರಿಂಕ, ವಲಯ ಸೇನಾನಿ ರೊ|ಯಶೋಧರ ಶೆಟ್ಟಿ ಉಪಸ್ಥಿತರಿದ್ದರು.
