ಪಾಂಬೂರು : ವ್ಯಕ್ತಿಯೋರ್ವ ಕಾಣೆ
Thumbnail
ಶಿರ್ವ : ಕಾಪು ತಾಲೂಕಿನ ಪಾಂಬೂರಿನ ಲಕ್ಷ್ಮಣ್‌ ರಾವ್‌ (66) ಕಾಣೆಯಾದ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಜಾತ ರಾವ್‌ ಎಂಬುವವರು ನೀಡಿದ ದೂರಿನಂತೆ ಅವರ ಗಂಡ ಶಿವರಾಯ ರಾವ್‌ ಮತ್ತು ತಂದೆ ಲಕ್ಷ್ಮಣ್‌ ರಾವ್‌ ರವರು ಉಡುಪಿ ಬನ್ನಂಜೆಯ ಕೆನರಾ ಬ್ಯಾಂಕ್‌ ವ್ಯವಹಾರದ ಬಗ್ಗೆ ಬಸ್ಸಿನಲ್ಲಿ ಬಂದವರು ಉಡುಪಿಯ ಕೆಎಂ ಮಾರ್ಗದ ಬಳಿ ಬಸ್ಸಿನಿಂದ ಇಳಿದಿದ್ದು, ಶಿವರಾಯ ರಾವ್‌ರವರು ಲಕ್ಷ್ಮಣ ರಾವ್‌ರವರನ್ನು ಅಲ್ಲಿಯೇ ನಿಲ್ಲಲು ಹೇಳಿ ರಾಧಾ ಮೆಡಿಕಲ್‌ಗೆ ಹೋಗಿ ಔಷಧಿಯನ್ನು ತೆಗೆದುಕೊಂಡು ವಾಪಾಸು ಹಿಂತಿರುಗಿ ಬಂದು ನೋಡಿದಾಗ ಲಕ್ಷ್ಮಣ ರಾವ್‌ರವರು ಅಲ್ಲಿರಲಿಲ್ಲ. ಈವರೆಗೂ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ.
06 Jul 2022, 11:37 AM
Category: Kaup
Tags: