ಕಾಪು : ಎಲೆಕ್ಟ್ರಿಕಲ್ ಪೊಲ್‌ಗೆ ಕಾರು ಢಿಕ್ಕಿ, ಪಲ್ಟಿ ; ನವಯುಗ ಕಂಪನಿಗೆ ನಷ್ಟ
Thumbnail
ಕಾಪು : ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ಎಲೆಕ್ಟ್ರಿಕಲ್ ಪೊಲ್‌ ಗೆ ಢಿಕ್ಕಿ ಹೊಡೆದು, ಪಲ್ಟಿಯಾಗಿ ಎಲೆಕ್ಟ್ರಿಕಲ್ ಪೊಲ್‌ ಜಖಂಗೊಂಡ ಘಟನೆ ಕಾಪುವಿನಲ್ಲಿ ನಡೆದಿದೆ. ಬೆಳಗ್ಗಿನ ಸಮಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ಬಂದು ಕಾಪು ವಿದ್ಯಾನಿಕೇತನ ಶಾಲೆಯ ಬಳಿ ಸರ್ವಿಸ್ ರಸ್ತೆಗೆ ನವಯುಗ ಕಂಪನಿಯವರು ಅಳವಡಿಸಿದ ಎಲೆಕ್ಟ್ರಿಕಲ್ ಪೊಲ್‌ ಗೆ ಢಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಬಿದ್ದು, ಪರಿಣಾಮ ಎಲೆಕ್ಟ್ರಿಕಲ್ ಪೊಲ್‌ ಜಖಂಗೊಂಡು ಅದರ ಮೇಲಿದ್ದ ಎರಡು ಬಲ್ಬ್‌ಗಳು ಜಖಂ ಗೊಂಡಿದೆ. ಢಿಕ್ಕಿ ಹೊಡೆದ ಕಾರು ಸಂಪೂರ್ಣ ಜಖಂ ಗೊಂಡಿರುತ್ತದೆ. ಕಾರಿನಲ್ಲಿದ್ದ ಅರುಣಕುಮಾರ ರವರಿಗೆ ಬಲಭಾಗದ ಪಕ್ಕೆಲುಬಿಗೆ ಗುದ್ದಿದ ಒಳ ನೋವುಂಟಾಗಿರುತ್ತದೆ. ಈ ಅಪಘಾತದಿಂದ ನವಯುಗ ಕಂಪನಿಗೆ ಸುಮಾರು 2,04,000 ರೂ, ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
08 Jul 2022, 07:25 PM
Category: Kaup
Tags: