ಬಿರುವೆರ್ ಕಾಪು ಸೇವಾ ಸಮಿತಿಯಿಂದ ವರ್ಗಾವಣೆಗೊಳ್ಳಲಿರುವ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್ ರವರಿಗೆ ಗೌರವ
ಕಾಪು : ಇಲ್ಲಿನ ಪೊಲೀಸ್ ವೃತ್ತ ನಿರೀಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಪ್ರಕಾಶ್ ಇವರು ಬಜ್ಪೆ ಠಾಣೆಗೆ ವರ್ಗಾವಣೆಗೊಂಡಿರುತ್ತಾರೆ.
ಅವರ ಸೇವೆಯನ್ನು ಗಮನಿಸಿ ಸಮಾಜ ಸೇವಾ ಸಂಸ್ಥೆ ಬಿರುವೆರ್ ಕಾಪು ಸೇವಾ ಸಮಿತಿ (ರಿ.)ಯ ವತಿಯಿಂದ ಬೀಳ್ಕೊಡುಗೆಯ ನಿಮಿತ್ತ ಅವರ ವೃತ್ತಿ ಜೀವನಕ್ಕೆ ಶುಭಾಶಯ ಕೋರಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿರುವೆರ್ ಕಾಪು ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
