ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು - ಪೀನ ಕನ್ನಡಿಯ ಉದ್ಘಾಟನೆ
Thumbnail
ಕಾಪು : 25 ನೇ ಬೆಳ್ಳಿ ಹಬ್ಬದ ಹೊಸ್ತಿಲಲ್ಲಿ ಇರುವ ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ (ರಿ.) ಬಂಟಕಲ್ಲು ಇದರ ಮೊದಲ ಯೋಜನೆ, 92 ಹೇರೂರು ಗ್ರಾಮದಲ್ಲಿ ಪೀನ ಕನ್ನಡಿ ಹಾಕುವ ಮೂಲಕ ಉದ್ಘಾಟಿಸಲಾಯಿತು. ಉದ್ಘಾಟನೆಯನ್ನು ದುರ್ಗಾ ಮೆಟಲ್ ವರ್ಕ್ಸ್ ನ ಮಾಲೀಕರಾದ ಅನಿಲ್ ಕಲ್ಲುಗುಡ್ಡೆ ಇವರು ನೆರವೇರಿಸಿದರು. ಆಳವಾದ ತಿರುವು ಈ ರಸ್ತೆಯಲ್ಲಿ ಇರುವುದರಿಂದ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಆದುದರಿಂದ ಮಜೂರು ಪಂಚಾಯತ್ ಸದಸ್ಯರಾದ ವಿಜಯ್ ಧೀರಜ್ ಅವರ ಪ್ರಸ್ತಾವನೆಯ ಮೂಲಕ, ಶ್ರೀ ದುರ್ಗಾ ಮೆಟಲ್ ವರ್ಕ್ಸ್ ಅವರ ಪ್ರಾಯೋಜತ್ವ ದಲ್ಲಿ, ಈ ಯೋಜನೆಯನ್ನು ಬಂಟಕಲ್ಲು ರಿಕ್ಷಾ ಚಾಲಕರು ಕೈಗೆತ್ತಿಕೊಂಡಿದ್ದಾರೆ. ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು ಈ ಸಂಘದ 25 ನೆ ವಾರ್ಷಿಕೋತ್ಸವ ದ ಪ್ರಯುಕ್ತ, ಈ ವರ್ಷದಲ್ಲಿ ಸುಮಾರು 25 ಕಾರ್ಯಕ್ರಮಗಳನ್ನ ಹಮ್ಮಿ ಕೊಳ್ಳುವ ಯೋಜನೆ ಮಾಡಿದ್ಧೇವೆ ಎಂದು ಅಧ್ಯಕ್ಷರು ತಿಳಿಸಿದರು. ಈ ಸಂದರ್ಭ ಸ್ಥಳೀಯರ ಸಹಕಾರವನ್ನು ಅವರು ಕೋರಿದರು. ಕಾರ್ಯಕ್ರಮದಲ್ಲಿ ಸಂಘದ ಕೋಶಾಧಿಕಾರಿ ರಾಘವೇಂದ್ರ, ಮುದ್ದು ಮೂಲ್ಯ, ಸುರೇಶ್ ಕಲ್ಲುಗುಡ್ಡೆ, ನವೀನ್, ಸುರೇಶ್ ರಾವ್, ಅನಿಲ್ ಜಾನ್ಸನ್, ರಾಜೇಶ್ ಕುಂಜ ಹಾಗೂ ಗ್ರಾಮಸ್ಥರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು ಇದರ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಸ್ವಾಗತಿಸಿದರು. ವಿಜಯ್ ಧೀರಜ್ ಕಾರ್ಯಕ್ರಮ ನಿರೂಪಿಸಿದರು. ಶಿರ್ವ ಪಂಚಾಯತ್ ಸದಸ್ಯ ಸತೀಶ್ ಅರಸಿಕಟ್ಟೆ ವಂದಿಸಿದರು.
10 Jul 2022, 06:35 PM
Category: Kaup
Tags: