ಚಿತ್ರಕಲಾ ಶಿಕ್ಷಕ ರಮೇಶ್ ಆಚಾರ್ಯ ಬಂಟಕಲ್ಲು ರಚಿಸಿದ ತುಳುನಾಡಿನ ಭೂತಾರಾಧನೆ ಮುಖವಾಡ( ಮೊಗ) ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆ
Thumbnail
ಕಾಪು : ತಾಲೂಕಿನ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ವಾಸವಾಗಿರುವ ರಮೇಶ್‌ ಆಚಾರ್ಯ ಬಂಟಕಲ್ಲು ಇವರು ರಚಿಸಿದ 7ಪೀಟ್‌ ಉದ್ದ 5ಪೀಟ್ 11ಇಂಚು ಅಗಲದ ಸೆಣಬು ನಾರಿನ ಚೌಕಟ್ಟಿನೊಳಗೆ ಡ್ರಾಯಿಂಗ್ ಶೀಟ್ ಗಂ, ಸರಿಗೆ ಮತ್ತು ಬಣ್ಣಗಳನ್ನು ಉಪಯೋಗಿಸಿ ತುಳುನಾಡಿನ ಭೂತಾರಾಧನೆ ಮುಖವಾಡ(ಮೊಗ) ವನ್ನು ರಚಿಸಿದ್ದು ಜನಮನ ಗೆದ್ದು ,ಜೂನ್10, 2022ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿರುತ್ತದೆ ಇವರು ರೋಟರಾಕ್ಟ್ ಕ್ಲಬ್ ಶಿರ್ವದಲ್ಲಿ ಸದಸ್ಯರಾಗಿ ಉಪಾಧ್ಯಾಕ್ಷರಾಗಿ, ರೋಟರಾಕ್ಟ್ ಕ್ಲಬ್ 92 ಹೇರೂರು, ಬಂಟಕಲ್ಲು ಇದರ ಸ್ಥಾಪಕ ಅಧ್ಯಕ್ಷನಾಗಿ ಶಿರ್ವ ಚೇಸಿಯ ಅಧ್ಯಕ್ಷನಾಗಿ ಬಡ ಕುಟುಂಬಕ್ಕೆ ಉಚಿತ ಮನೆ ನಿರ್ಮಿಸಿ ಕೊಟ್ಟು ಹಲವಾರು ಪ್ರಶಸ್ತಿಗಳನ್ನು ಗಳಿಸಿರುತ್ತಾರೆ. 200ರಕ್ಕೂ ಮಿಕ್ಕಿ ಕಲಾಶಿಬಿರಗಳನ್ನು ಮಾಡಿ, ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿರುತ್ತಾರೆ. ತನ್ನ ಮಗನ ಉಪನಯನದ ಸಂದರ್ಭ ವಿಶ್ವಕರ್ಮ ಸಮಾಜದ 10 ಮಂದಿ ವಟುಗಳಿಗೆ ಉಚಿತ ಉಪನಯನ ಮಾಡಿರುತ್ತಾರೆ. ಇವರ ಪ್ರತಿಭೆಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿರುತ್ತದೆ. ಬಸವ ರತ್ನ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಇವರಿಗೆ ಶಿಕ್ಷಣ ಇಲಾಖೆಯು ಸಾಧಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿರುತ್ತದೆ. ಪ್ರಸ್ತುತ ಸರಕಾರಿ ಪದವಿಪೂರ್ವ ಕಾಲೇಜು, ಬೆಳ್ಳಣ್ಣು ಇಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಇದ್ದು ಇತ್ತೀಚೆಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಚಿತ್ರಕಲಾ ಪರೀಕ್ಷೆಯಲ್ಲಿ ಹಾಜರಾದ ವಿದ್ಯಾರ್ಥಿಗಳು ಶೇಕಡ 100 ಫಲಿತಾಂಶ ತಂದಿದ್ದು, 4 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ.
12 Jul 2022, 07:33 PM
Category: Kaup
Tags: