ಕಾಪು ಕುಲಾಲ ಸಮುದಾಯ ಭವನಕ್ಕೆ ನಿವೇಶನ ಒದಗಿಸಲು ಮುಖ್ಯಮಂತ್ರಿಗೆ ಮನವಿ
Thumbnail
ಕಾಪು : ಕುಲಾಲ ಸಮಾಜದ ಬಹು ದಿನದ ಕನಸು ಕಾಪು ಕುಲಾಲ ಸಮುದಾಯ ಭವನ. ಇದಕ್ಕಾಗಿ ನಿವೇಶನ ಒದಗಿಸುವಂತೆ ಇತ್ತೀಚಿಗೆ ಮುಖ್ಯಮಂತ್ರಿ ಉಡುಪಿ ಭೇಟಿ ಸಮಯ ಮನವಿ ನೀಡಲಾಯಿತು. ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಲಾಲ್ ಕಡಿಯಾಳಿ ಮನವಿ ಸಲ್ಲಿಸಿದರು. ಕುಲಾಲ ಸಮಾಜದ ಬಂಧುಗಳು ಅಂದಿನ ಇಂದಿನವರೆಗೂ ಮಡಿಕೆ ತಯಾರಿ ವೃತ್ತಿಯನ್ನು ಮಾಡಿಕೊಂಡು ಅತೀ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಇತಿಹಾಸದ ಪುಟ ಬಿಚ್ಚಿದಾಗ ಕುಂಬಾರ ಸಮುದಾಯದವರು ನೂರಾರು ವರ್ಷಗಳ ಮುಂಚೆಯೇ ತಮ್ಮ ನೆಲೆಯನ್ನು ಹೊಂದಿರುವರು ಎಂದು ತಿಳಿದು ಬರುತ್ತದೆ. ತಮ್ಮ ಮೂಲ ವೃತ್ತಿ ಮಡಿಕೆ ಮಾಡಲು ಈಗಿನ ಆಧುನಿಕ ಯುಗದಲ್ಲಿ ಮಡಿಕೆಯ ಅವಶ್ಯಕತೆ ಇಲ್ಲದ ಕಾರಣ ಪರ್ಯಾಯ ಉದ್ಯೋಗ ಅರಸಿ ಹೋಗಿ ಜೀವನ ಸಾಗಿಸಲು ಚಿಂತಿತ ಮನೋಭಾವ ಹೊಂದಿರುದು ಕಟು ಸತ್ಯ. ಈ ಬಾರಿಯಯಾದರು ಅತೀ ಬೇಗನೆ ಕಾಪು ಕುಲಾಲ ಸಮುದಾಯ ಭವನ ನಿರ್ಮಿಸಲು ನಿವೇಶನ ದೊರಕಲಿ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ✍ ಯು.ಕೆ
12 Jul 2022, 09:23 PM
Category: Kaup
Tags: