ಆನ್ ಲೈನ್ ಮೋಸ : ಖರೀದಿಸಿದ ಶೂ ಹಿಂತಿರುಗಿಸುವ ಸಂದರ್ಭ ಬ್ಯಾಂಕ್ ಖಾತೆಯ ಹಣ ಗುಳುಂ
Thumbnail
ಉಡುಪಿ : ಶೂ ಖರೀದಿಸಿ ಅದನ್ನು ಹಿಂತಿರುಗಿಸುವ ಸಂದರ್ಭ ಕ್ರೆಡಿಟ್ ಕಾಡ್೯ ಮಾಹಿತಿಯನ್ನು ಒದಗಿಸಿ ಬ್ಯಾಂಕ್ ಖಾತೆಯಿಂದ ‌ಹಣವನ್ನು ಕಳೆದುಕೊಂಡ ಘಟನೆ ಜುಲೈ 13ರಂದು ಬ್ರಹ್ಮಾವರದಲ್ಲಿ ನಡೆದಿದೆ. ವಸಂತ ಶೆಟ್ಟಿ ಎಂಬುವವರು ಬ್ರಹ್ಮಾವರ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಅದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನಂಬ್ರ ಹೊಂದಿರುತ್ತಾರೆ. ಇವರು ಖರೀದಿಸಿದ್ದ ಶೂ ವನ್ನು ಹಿಂತಿರುಗಿಸುವ ಬಗ್ಗೆ ಕರೆ ಮಾಡಿದಾಗ ನಿಮ್ಮ ಶೂ ಹಣವನ್ನು ಹಿಂತಿರುಗಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ವಿವರ ಒದಗಿಸುವಂತೆ ಸೂಚಿಸಿದ ಮೇರೆಗೆ ಕ್ರೆಡಿಟ್ ಕಾರ್ಡ್ ವಿವರ ಒದಗಿಸಿದ್ದು, ಆ ಬಳಿಕ ಅವರ ಕ್ರೆಡಿಟ್ ಕಾರ್ಡ್ ನಿಂದ ಅದೇ ದಿನ ರೂ. 20,290/-, ರೂ. 15,217/- ಹಾಗೂ ರೂ. 3,554/- ಒಟ್ಟು ರೂ. 39,061/- ಹಣವನ್ನು ಯಾರೋ ಅಪರಿಚಿತ ವ್ಯಕ್ತಿ ವಸಂತ್ ರವರ ಗಮನಕ್ಕೆ ಬಾರದೇ ಅನಧಿಕೃತವಾಗಿ ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
15 Jul 2022, 10:16 PM
Category: Kaup
Tags: