ಶಿರ್ವ ನಿರಂತರ, ಅನಿಯಮಿತ ವಿದ್ಯುತ್ ಕಡಿತ ನಾಳೆ ಬಳಕೆದಾರರ ಬೃಹತ್ ಪ್ರತಿಭಟನೆ
Thumbnail
ಶಿರ್ವ : ಮೆಸ್ಕಾಂ ಇಲಾಖೆಯ ವ್ಯಾಪ್ತಿಯಲ್ಲಿ 5- 6 ತಿಂಗಳಿಂದ ನಿರಂತರವಾಗಿ ಅನಿಯಮಿತ, ರಾತ್ರಿ ಹಗಲು ಎನ್ನದೆ ವಿದ್ಯುತ್ ಕಡಿತ, ಶಿರ್ವ ಮೆಸ್ಕಾಂ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯನ್ನು ಪ್ರತಿಭಟಿಸಿ ಬಳಕೆದಾರರ ಬೃಹತ್ ಪ್ರತಿಭಟನೆಯು ಜುಲೈ 16 ಬೆಳಿಗ್ಗೆ 10 ಗಂಟೆಗೆ ಶಿರ್ವ ಮೆಸ್ಕಾಂ ಕಛೇರಿ ಮುಂದೆ ಬಳಕೆದಾರರ ಪ್ರತಿಭಟನೆ ನಡೆಯಲಿದೆ ಎಂದು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಆರ್ ಪಾಟ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಎಲ್ಲಾ ವಿದ್ಯುತ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದ್ದಾರೆ‌.
15 Jul 2022, 11:30 PM
Category: Kaup
Tags: