ಕಾಪು : ಶಿರ್ವದಲ್ಲಿ ಅನಿಯಮಿತ ವಿದ್ಯುತ್ ಕಡಿತ ; ಬಳಕೆದಾರರಿಂದ ಮೆಸ್ಕಾಂ ಕಛೇರಿ ಎದುರು ಬೃಹತ್ ಪ್ರತಿಭಟನೆ
Thumbnail
ಶಿರ್ವ: ಮೆಸ್ಕಾಂ ಇಲಾಖೆಯ ವ್ಯಾಪ್ತಿಯಲ್ಲಿ ೫- ೬ ತಿಂಗಳಿಂದ ನಿರಂತರವಾಗಿ ಅನಿಯಮಿತ, ರಾತ್ರಿ ಹಗಲು ಎನ್ನದೆ ವಿದ್ಯುತ್ ಕಡಿತ, ಶಿರ್ವ ಮೆಸ್ಕಾಂ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯನ್ನು ಪ್ರತಿಭಟಿಸಿ, ಬಳಕೆದಾರರ ಬೃಹತ್ ಪ್ರತಿಭಟನೆ ಶಿರ್ವ ಮೆಸ್ಕಾಂ ಕಛೇರಿ ಎದುರು ಶನಿವಾರ ಬೆಳಿಗ್ಗೆ ನಡೆಯಿತು. ಈ ಪ್ರತಿಭಟನೆಯ ನೇತೃತ್ವವನ್ನು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮರಾಯ ಪಾಟ್ಕರ್ ವಹಿಸಿದ್ದರು. ಗ್ರಾಮಸ್ಥರ ಪರವಾಗಿ ಕೆಇಬಿ ಅಧಿಕಾರಿಗಳಾದ ಹರೀಶ್ ಕುಮಾರ್ ಮತ್ತು ಪ್ರಸನ್ನ ಕುಮಾರ್ ರವರಿಗೆ ಮನವಿ ಸಲ್ಲಿಸಲಾಯಿತು. ಮುಂದಿನ ಹದಿನೈದು ದಿನಗಳಲ್ಲಿ ಸಮಸ್ಯೆ ಪರಿಹರಿಸದಿದ್ದರೆ, ಮತ್ತೆ ಪ್ರತಿಭಟನೆ ನಡೆಸುವುದಾಗಿ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮರಾಯ ಪಾಟ್ಕರ್ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರು ಪಕ್ಷ, ಜಾತಿ ಭೇದ ಮರೆತು ಭಾಗವಹಿಸಿದ್ದರು.
16 Jul 2022, 04:26 PM
Category: Kaup
Tags: