ಕಡೆಕಾರು : ಉಚಿತ ಆರೋಗ್ಯ ತಪಾಸಣಾ ಶಿಬಿರ
Thumbnail
ಉಡುಪಿ‌: ಕಡೆಕಾರು ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಡೆಕಾರು, ಕುತ್ಪಾಡಿ ಇವರ ಸಹಯೋಗದೊಂದಿಗೆ ಜುಲೈ 20ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವು ಕಡೆಕಾರು- ಕುತ್ಪಾಡಿ ಅಂಗನವಾಡಿ ಪಡುಕೆರೆಯಲ್ಲಿ ಜರಗಿತು. ಈ ಸಂದರ್ಭ ಮಧುಮೇಹ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ನುರಿತ ವೈದ್ಯರಿಂದ ಸಲಹೆ, ಕೋವಿಡ್ ಲಸಿಕಾ ವಿತರಣಾ ಕಾರ್ಯಕ್ರಮ, ಆಯುಷ್ಮಾನ್ ಕಾರ್ಡ್, ಸೀನಿಯರ್ ಸಿಟಿಜನ್ ಕಾರ್ಡ್ ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.
20 Jul 2022, 04:36 PM
Category: Kaup
Tags: