ಸುರತ್ಕಲ್ ರಸ್ತೆ ಅಪಘಾತದಲ್ಲಿ ಕಟಪಾಡಿಯ ಮೂಡಬೆಟ್ಟು ದೇವಸ್ಥಾನದ ಅರ್ಚಕ ದುರ್ಮರಣ
Thumbnail
ಕಟಪಾಡಿ : ಸುರತ್ಕಲ್ ನಲ್ಲಿ ಲಾರಿ ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಉಡುಪಿ ಕಟಪಾಡಿ ಬಳಿಯ ಮಟ್ಟು ನಿವಾಸಿ, ದೇಗುಲದ ಅರ್ಚಕ ಅಕ್ಷಯ್ ಕೆ. ಆರ್ (33) ದುರ್ಮರಣ ಹೊಂದಿದ್ದಾರೆ. ಕಟಪಾಡಿ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನಡೆಸುತ್ತಿದ್ದ ಅಕ್ಷಯ್ ಸುರತ್ಕಲ್ ನಲ್ಲಿ ಪೂಜೆ ಮುಗಿಸಿ ಕಟಪಾಡಿ ಗೆ ಹಿಂತಿರುಗಿ ಬರುವ ವೇಳೆಯಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮೃತರು ತಾಯಿಯನ್ನು ಅಗಲಿದ್ದಾರೆ.
22 Jul 2022, 01:10 PM
Category: Kaup
Tags: