ಬಂಟಕಲ್ಲು‌: ಶ್ರೀ ವಿಶ್ವಕರ್ಮ ಸಂಘ ಇದರ ಗಾಯತ್ರಿ ವೃಂದದ ಸದಸ್ಯರಿಂದ ಆಟಿಡೊಂಜಿ ದಿನ ಕಾರ್ಯಕ್ರಮ
Thumbnail
ಬಂಟಕಲ್ಲು : ಇಲ್ಲಿನ ಶ್ರೀ ವಿಶ್ವಕರ್ಮ ಸಂಘ ಇದರ ಗಾಯತ್ರಿ ವೃಂದದ ಸದಸ್ಯರಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಕಲಾವಿದೆ 12ನೆ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಿಂದ ಕರ್ನಾಟಕ ಯುವರತ್ನ ಪ್ರಶಸ್ತಿ ಹಾಗೂ ಕಲಾರತ್ನ ಪ್ರಶಸ್ತಿ ಪಡೆದ ಪಡುಬಿದ್ರೆ ರೂಪ ವಸುಂಧರಾ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಈ‌ ಸಂದರ್ಭ ಮಾತನಾಡಿದ ಅವರು ಪ್ರತಿಭೆ ಎಲ್ಲರಲ್ಲೂ ಇದೆ ಅದಕ್ಕೆ ಪ್ರೋತ್ಸಾಹ ಸಿಕ್ಕಿದರೆ ಅದು ಇನ್ನಷ್ಟು ಬೆಳಕಿಗೆ ಬರುತ್ತದೆ. ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವುದರೊಂದಿಗೆ ನಮ್ಮತನವನ್ನು ನಾವು ಉಳಿಸಿ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಮಾಜದ 7 ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಗಾಯತ್ರಿ ಮಹಿಳಾ ಬಳಗದ ಅಧ್ಯಕ್ಷೆ ಮಾಲತಿ ರವೀಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿ ಆಟಿಯ ತಿಂಡಿ ತಿನಸುಗಳು ಯುವ ಪೀಳಿಗೆಗೆ ಅಗತ್ಯವಾಗಿ ಬೇಕಾಗಿದೆ ಅದನ್ನು ಉಳಿಸಿ ಪರಿಚಯಿಸಬೇಕಾದೆ ಎಂದು ತಿಳಿಸಿದರು. ವಿಶ್ವಕರ್ಮ ಸಂಘದ ಅಧ್ಯಕ್ಷ ಮುರಳೀಧರ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಗಣಪತಿ ಆಚಾರ್ಯ ಬಿಳಿಯಾರು, ಯುವಕ ಸೇವಾದಳದ ಅಧ್ಯಕ್ಷ ರಾಜೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 41ಬಗೆಯ ತಿಂಡಿ ತಿನಸುಗಳನ್ನು ಉಣಬಡಿಸಲಾಯಿತು. ಗಾಯತ್ರಿ ವೃಂದದ ಸದಸ್ಯರು ಪ್ರಾರ್ಥಿಸಿದರು. ವಿದ್ಯಾ ಹರೀಶ್ ಆಚಾರ್ಯ ಮತ್ತು ವಸಂತಿ ಅಶೋಕ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
26 Jul 2022, 11:20 PM
Category: Kaup
Tags: