ತುಳುಕೂಟ ಬೆಂಗಳೂರಿನ ವತಿಯಿಂದ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ
Thumbnail
ಉಡುಪಿ : ತುಳುಕೂಟ ಬೆಂಗಳೂರಿನ ವತಿಯಿಂದ ಪ್ರತಿ ವರುಷ ಬೆಂಗಳೂರಿನಲ್ಲಿ ವಾಸವಾಗಿರುವ. ತುಳುನಾಡಿನ ಜನರಿಗೆ ಅನಾದಿಕಾಲದಿಂದಲೂ ಆಚರಣೆಯಲ್ಲಿರುವ ಆಷಾಢ ಮಾಸದಲ್ಲಿ ಉಪಯೋಗಿಸುವ ಕಷಾಯ ಮತ್ತು ಮೆಂತೆ ಗಂಜಿ ವಿತರಣಾ ಕಾರ್ಯಕ್ರಮವು ಶೇಷಾದ್ರಿಪುರದಲ್ಲಿರುವ ಶ್ರೀ ರಾಘವೇಂದ್ರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಳುಕೂಟ ಬೆಂಗಳೂರಿನ ಅಧ್ಯಕ್ಷರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಉಪಾಧ್ಯಕ್ಷ ರಾದ ಅಜಿತ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಸುಂದರ್ ರಾಜ್ ರೈ, ಕೋಶಾಧಿಕಾರಿ ಮಾಳ ಹರ್ಷೇಂದ್ರ ಜೈನ್, ಜೊತೆ ಕಾರ್ಯದರ್ಶಿ ಗಣೇಶ್ ಗುಜಾರಾನ್, ಮಹಿಳಾ ಸಮಿತಿಯ ಉಪಾಧ್ಯಕ್ಷೆ ಸೇವಾಂತಿ ಶೆಟ್ಟಿ, ಸುವರ್ಣ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಕೆ.ವಿ ರಾಜೇಂದ್ರ ಕುಮಾರ್, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ಕಾಂತಿ ಶೆಟ್ಟಿ, ಉಮೇಶ್ ಕುಮಾರ್ ರೈ, ಸುಧಾ ಪುತ್ತೂರಾಯ, ಪ್ರದೀಪ್, ಮೆಂಡೋಷ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಬಂಟರ ಸಂಘ ಬೆಂಗಳೂರು, ತುಳುವೆರೆಂಕುಲು ಬೆಂಗಳೂರು, ತುಳುವೆರ ಚಾವಾಡಿ, ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಮತ್ತು ಬೆಂಗಳೂರಿನ ಇನ್ನಿತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತಿ ಇದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
28 Jul 2022, 06:04 PM
Category: Kaup
Tags: