ಬಂಟಕಲ್ಲು : ಶ್ರೀ ಗಾಯತ್ರಿ ಬಳಗದ ಸದಸ್ಯರಿಂದ ವರ ಮಹಾಲಕ್ಷ್ಮಿ ಪೂಜೆ ; ಯಕ್ಷಗಾನ ತಾಳ ಮದ್ದಳೆ
Thumbnail
ಬಂಟಕಲ್ಲು : ಇಲ್ಲಿನ ಶ್ರೀ ವಿಶ್ವಕರ್ಮ ಸಂಘ (ರಿ) ಇದರ ಆಶ್ರಯದಲ್ಲಿ ಶ್ರೀ ಗಾಯತ್ರಿ ಬಳಗದ ಸದಸ್ಯರಿಂದ ವರ ಮಹಾಲಕ್ಷ್ಮಿ ಪೂಜೆ ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದಲ್ಲಿ ಜರಗಿತು. ಸಂಘದ ಅಧ್ಯಕ್ಷರಾದ ಮುರಳೀಧರ ಆಚಾರ್ಯ, ಯುವಕ ಸೇವಾದಳದ ಅಧ್ಯಕ್ಷ ಬಿಳಿಯಾರು ರಾಜೇಶ್ ಆಚಾರ್ಯ, ಗಾಯತ್ರಿ ಮಹಿಳಾ ಬಳಗದ ಅಧ್ಯಕ್ಷೆ ಮಾಲತಿ ರವೀಂದ್ರ ಆಚಾರ್ಯ ಮತ್ತು ಎಲ್ಲಾ ಪೂಜಾ ವ್ರತಾಧಾರಿಗಳು ಉಪಸ್ಥಿತರಿದ್ದರು. ಸಾರ್ವಜನಿಕ ಅನ್ನ ಪ್ರಸಾದದ ಬಳಿಕ ಬಡಾನಿಡಿಯೂರು ಕೇಶವ ರಾವ್ ಇವರ ನಿರ್ದೇಶನದಲ್ಲಿ ಮಹಿಳಾ ಬಳಗದ ಸದಸ್ಯರಿಂದ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳ ಮದ್ದಳೆ ಜರಗಿತು.
05 Aug 2022, 10:41 PM
Category: Kaup
Tags: