ಬಿಲ್ಲವರ ಸಹಾಯಕ ಸಂಘ ಕಾಪು : ವರಮಹಾಲಕ್ಷ್ಮಿ ಪೂಜೆ
Thumbnail
ಕಾಪು : ಇಲ್ಲಿನ ಬಿಲ್ಲವರ ಸಹಾಯಕ ಸಂಘದಲ್ಲಿ ವೈಭವದ ವರಮಹಾಲಕ್ಷ್ಮಿ ಪೂಜೆಯು ಕಟಪಾಡಿಯ ಚರಣ್ ಶಾಂತಿ ಪೌರೋಹಿತ್ಯದಲ್ಲಿ ಇಂದು ಜರಗಿತು. ಈ ಸಂದರ್ಭದಲ್ಲಿ ‌ಸುಮಾರು‌ ಒಂದು ಸಾವಿರಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸಿ ಶ್ರೀ ವರ ಮಹಾಲಕ್ಷ್ಮಿಯ ಪ್ರಸಾದವನ್ನು ಸ್ವೀಕರಿಸಿದರು. ಬಿಲ್ಲವರ ಸಹಾಯಕ ಸಂಘ ಕಾಪು ಗೌರವಾಧ್ಯಕ್ಷರಾದ ಪ್ರಭಾಕರ ಪೂಜಾರಿ, ಅಧ್ಯಕ್ಷರಾದ ವಿಕ್ರಂ ಕಾಪು, ಮಹಿಳಾ ಮಂಡಳಿಯ ಅಧ್ಯಕ್ಷರಾದ ಆಶಾಶಂಕರ್, ಉಪಾಧ್ಯಕ್ಷೆ ಸರಿತ, ಶಶಿಧರ ಸುವರ್ಣ, ಯೋಗೀಶ್ ಕೋಟ್ಯಾನ್, ಉದಯ‌ ಸನಿಲ್, ಅನಿಲ್ ಕುಮಾರ್, ಶೇಖರ್, ಸಕೇಂದ್ರ ಸುವರ್ಣ, ಗೀತಾಂಜಲಿ ‌ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
Additional image
05 Aug 2022, 10:56 PM
Category: Kaup
Tags: