ಜೆಡಿಎಸ್ ನ ಶಾಲಾ ಸಂಪರ್ಕ ಸೇತು ಯೋಜನೆಗೆ ತಿಲಾಂಜಲಿ ಇಟ್ಟ ಬಿಜೆಪಿ : ಯೋಗೀಶ್ ಶೆಟ್ಟಿ ಬಾಲಾಜಿ
ಕಾಪು : ಇತ್ತೀಚೆಗಷ್ಟೇ ಬೈಂದೂರು ಕ್ಷೇತ್ರದ ಕಾಲ್ತೋಡು ಗ್ರಾಮದ ಬೊಳ್ಳಂಬಳ್ಳಿ ಮಕ್ಕಿಮನೆ ಪ್ರದೀಪ್ ಪೂಜಾರಿಯವರ 7 ವರ್ಷದ ಮಗಳು ಸನ್ನಿಧಿ ಕಾಲು ಸಂಕದಿಂದ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಘಟನೆ ನಿಜಕ್ಕೂ ಮನಕುಲಕುವಂತದ್ದು.
ಮಕ್ಕಳಿಗೆ ಮಳೆಗಾಲದಲ್ಲಿ ಶಾಲೆಗೆ ತೆರಳಲು ಅನುಕೂಲವಾಗಲಿ ಎಂದು ಎಚ್.ಡಿ. ಕುಮಾರಸ್ವಾಮಿಯವರು ಜಾರಿಗೊಳಿಸಿದ ರಾಜ್ಯಾದ್ಯಂತ ಸೇತುವೆಗಳ ನಿರ್ಮಾಣ ಮಾಡುವ "ಶಾಲಾ ಸಂಪರ್ಕ ಸೇತು" ಯೋಜನೆಗೆ ಬಿಜೆಪಿ ಪಕ್ಷದ ಸರಕಾರ ತಿಲಾಂಜಲಿ ಇಟ್ಟದ್ದು ಇದಕ್ಕೆ ಕಾರಣ. ಇದರಿಂದ ಮಳೆಗಾಲದಲ್ಲಿ ಇಲ್ಲಿನ ಜನರು ಪರದಾಡುವಂತಾಗಿದೆ.
ಆಗಸ್ಟ್ 8, ಸೋಮವಾರ ಬೈಂದೂರು ಕ್ಷೇತ್ರದ ಕಾಲ್ತೋಡು ಗ್ರಾಮದಲ್ಲಿ ಸನ್ನಿಧಿ ಎಂಬ 7 ವರ್ಷದ ಪುಟ್ಟ ಬಾಲಕಿ ಸರಿಯಾದ ಸಮರ್ಪಕವಾದ ಸೇತುವೆಗಳಿಲ್ಲದೆ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಮೃತದೇಹವು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ನಿಜವಾಗಿಯೂ ಮನಕಲಕುವಂತದ್ದು,
ಒಂದು ವೇಳೆ ಎಚ್.ಡಿ. ಕುಮಾರಸ್ವಾಮಿಯವರ ಯೋಜನೆ ಪೂರ್ಣಗೊಂಡಿದ್ದರೆ ಈ ಘಟನೆ ಖಂಡಿತವಾಗಿಯೂ ನಡೆಯುತ್ತಿರಲಿಲ್ಲ.
ಇಂತಹ ಘಟನೆಗಳಿಗೆ ಕಾರಣ ಏನೆಂದು ಜನರು ತಿಳಿದುಕೊಳ್ಳಬೇಕು, ಇನ್ನಾದರೂ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿಯವರು ವಿನಂತಿಸಿಕೊಂಡಿದ್ದಾರೆ.
