ಕಟಪಾಡಿ : ಚಿಣ್ಣರ ಬಾಲವನ ನವೀಕರಣದ ಉದ್ಘಾಟನೆ
Thumbnail
ಕಟಪಾಡಿ : 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಏಣಗುಡ್ಡೆ ಅಗ್ರಹಾರದ ಗ್ರಾಮದ ಮಕ್ಕಳಿಗೆ ಅನುಕೂಲವಾಗುವಂತೆ ಊರ ದಾನಿಗಳ ಸಹಾಯದಿಂದ ನಿರ್ಮಾಣಗೊಂಡಿದ್ದ ಮಕ್ಕಳ ಬಾಲವನದ ನವೀಕರಣದ ಉದ್ಘಾಟನೆಯು ಆಗಸ್ಟ್ 15 ರಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗ್ರಹಾರ ದ ಬಳಿಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಇದರ ಅಧ್ಯಕ್ಷರಾದ ದಿಲೀಪ್ ಕುಮಾರ್, ಕಾರ್ಯದರ್ಶಿ ಮಂಜುನಾಥ್, ಕೋಶಾಧಿಕಾರಿ ಅರ್ಜುನ್, ತಾಲೂಕು ಪಂಚಾಯತ್ ಸದಸ್ಯರಾದ ನಾಗೇಶ್ ಹಾಗೂ ಕಾರ್ಯಕರ್ತರಾದ ದೀಪಕ್ ದುರ್ಗಾನಗರ, ಸಂತೋಷ್.ಎನ್.ಎಸ್, ಕಟಪಾಡಿ ಗಣೇಶ್ ಉಪಸ್ಥಿತರಿದ್ದರು.
Additional image
15 Aug 2022, 05:48 PM
Category: Kaup
Tags: