ಪಡುಬಿದ್ರಿ : ವ್ಯಕ್ತಿ ಆತ್ಮಹತ್ಯೆ
ಪಡುಬಿದ್ರಿ : ಆರ್ಥಿಕ ಮುಗ್ಗಟ್ಟಿನಿಂದ ನೊಂದಿದ್ದ ಪೇಂಟರ್ ವೃತ್ತಿಮಾಡಿಕೊಂಡಿದ್ದ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಪಡುಬಿದ್ರಿ ಬೀಡು ಬಳಿಯ ಬಾಡಿಗೆ ಮನೆಯಲ್ಲಿ ನಡೆದಿದೆ.
ಮೃತ ವ್ಯಕ್ತಿ ಸೋನಿತ್ ಪೂಜಾರಿ(30)
ಅಣ್ಣ ಹಾಗೂ ಅತ್ತಿಗೆಯ ಜೊತೆ ಬೀಡು ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈತನ ಅಣ್ಣ ಹಾಗೂ ಅತ್ತಿಗೆ ಕೆಲಸಕ್ಕೆ ಹೋದ ವೇಳೆ ಈತ ಸಾವನ್ನಪ್ಪಿದ್ದಾನೆ.
ಮಂಗಳವಾರ ಸಂಜೆ ಐದು ಗಂಟೆಯವರೆಗೆ ಪೇಟೆಯಲ್ಲಿ ತಿರುಗುತ್ತಿದ್ದ ಸಂಜೆ ಹೊತ್ತಿಗೆ ಅತ್ತಿಗೆ ಮನೆಗೆ ಬಂದಾಗ ಒಳಗಡೆಯಿಂದ ಚಿಲಕ ಹಾಕಿಕೊಂಡಿದ್ದು, ಕಿಟಕಿಯಿಂದ ಇಣುಕಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
