ಕಳತ್ತೂರು : ಕುಶಲ ಶೇಖರ ಶೆಟ್ಟಿ ಆಡಿಟೋರಿಯಂ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
Thumbnail
ಕಾಪು : ಕುಶಲ ಶೇಖರ ಶೆಟ್ಟಿ ಇಂಟರ್‌ನ್ಯಾಷನಲ್ ಆಡಿಟೋರಿಯಂ ಕಳತ್ತೂರು ಇದರ ವತಿಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಹಿರಿಯರಾದ ವಾಸು ಶೆಟ್ಟಿ ನೆರವೇರಿಸಿದರು. ಆಡಿಟೋರಿಯಂನ ಮಾಲಕರಾದ ಶೇಖರ ಬಿ ಶೆಟ್ಟಿ ಅಧ್ಯಕ್ಷತೆ ವಹಿಸಿ ಈ ಸಲ 75ನೇ ವರ್ಷದ ಸವಿನೆನಪಿಗಾಗಿ ದ್ವಜಾರೋಹಣವನ್ನು ವಿಶೇಷವಾಗಿ ಆಚರಿಸಿದ್ದು, ಗ್ರಾಮಸ್ಥರಿಗೆ ಸತ್ಕಾರಕೂಟ ಏರ್ಪಡಿಸಲಾಗಿದೆ ಎಂದರು. ಕುಶಲ ಶೇಖರ ಶೆಟ್ಟಿ ಆಡಿಟೋರಿಯಂ ನಿರ್ದೇಶಕಿ ಕುಶಲ ಶೇಖರ ಶೆಟ್ಟಿ, ಆನಂದಿ ಶೆಟ್ಟಿ, ದಿವಾಕರ ಬಿ ಶೆಟ್ಟಿ, ದಿನೇಶ ಶೆಟ್ಟಿ ಕೊತ್ವಲಂಗಡಿ ಮತ್ತು ಶ್ರೀ ರಾಮ ಹಿರಿಯ ಪಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರಂದಾಡಿ ಶಿಕ್ಷಕ ನಿರ್ಮಲ್ ಕುಮಾ‌ರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
17 Aug 2022, 08:16 PM
Category: Kaup
Tags: