ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಕಾರವಾರ : ಶಿರ್ವ ಮತ್ತು ಮೂಡುಬೆಳ್ಳೆ ಶಾಖೆಯಿಂದ ಮಾನಸ ವಿಶೇಷ ಚೇತನ ಮಕ್ಕಳ ಪುನರ್ವಸತಿ ಕೇಂದ್ರ ಭೇಟಿ
ಕಾಪು : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಕಾರವಾರ ಇದರ ಶಿರ್ವ ಮತ್ತು ಮೂಡುಬೆಳ್ಳೆ ಶಾಖೆಯ ಮುಖೇನ ಮಾನಸ ವಿಶೇಷ ಚೇತನ ಮಕ್ಕಳ ಪುನರ್ವಸತಿ ಕೇಂದ್ರ ಪಾಂಬೂರು, ಇಲ್ಲಿಯ ಸುಮಾರು 110 ವಿದ್ಯಾರ್ಥಿಗಳಿಗೆ ಸೊಲಾಪುರ ಚಾದರ್ ಮತ್ತು ಸಿಹಿತಿಂಡಿಯನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್‌ರವರು ಸಂಸ್ಥೆಯು ಕಾರವಾರ ಮಾತ್ರವಲ್ಲದೆ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಅನೇಕ ಶಾಖೆಗಳನ್ನು ಹೊಂದಿದ್ದು ವಿವಿಧ ಸಮಾಜಸೇವಾ ಕಾರ್ಯಕ್ರಮಗಳ ಮುಖೇನ ಗುರುತಿಸಿಕೊಂಡಿದೆ. ಇಂದು ಮಾನಸ ಸಂಸ್ಥೆಯ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಬೆಡ್‌ಶೀಟ್ ಮತ್ತು ಸಿಹಿತಿಂಡಿ, ವಿತರಿಸಿ, ಮಾನವೀಯ ಮೌಲ್ಯಗಳಿಗೆ ಉತ್ತೇಜನ ನೀಡಿದ್ದು, ಶ್ಲಾಘನೀಯವಾಗಿದೆ ಎಂದು ಶುಭ ಹಾರೈಸಿ ಎಲ್ಲರಿಗೂ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಶುಭಾಶಯ ಕೋರಿದರು.
ಮತ್ತೋರ್ವ ಮುಖ್ಯ ಅತಿಥಿ ಹೋಲಿಕ್ರಾಸ್ ಚರ್ಚ್ ಧರ್ಮಗುರುಗಳಾದ ವಂದನೀಯ ಫಾ| ಹೆನ್ರಿ ಮಸ್ಕರೇನಸ್ ಮಾತನಾಡಿ, 'ಮಿಲಾಗ್ರಿಸ್ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದು ವಿಶೇಷ ಚೇತನ ಅಂದರೆ ದೇವರ ಮಕ್ಕಳನ್ನು ಸಂತೋಷಪಡಿಸುವ ಮೂಲಕ ದೇವರಿಗೆ ಅತ್ಯಂತ ಪ್ರಿಯವಾದ ಕೆಲಸ ಮಾಡಿದ್ದು ಅಭಿವಂದನಾರ್ಹವೆಂದು ಹೇಳಿದರು.
ಉಡುಪಿ ವಿಭಾಗದ ಅಭಿವೃದ್ಧಿ ಅಧಿಕಾರಿಯಾದ ಜೀವನ್ ಡಿಸೋಜರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಮಿಲಾಗ್ರಿಸ್ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಾರ್ಜ್ ಫೆರ್ನಾಂಡಿಸ್ ರವರ ಸಾಮಾಜಿಕ ಕಳಕಳಿಯ ಭಾಗವಾಗಿ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಜ್ಯದಲ್ಲಿರುವ ೧೧೧ ಶಾಖೆಗಳ ಮೂಲಕ ಸುಮಾರು 3000 ವಿಶೇಷ ಚೇತನ ಮತ್ತು ಅನಾಥ ಮಕ್ಕಳಿಗೆ ಸೋಲಾಪುರ ಚಾದರ ಮತ್ತು ಸಿಹಿತಿಂಡಿ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಮಾನಸದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹೆನ್ರಿ ಮಿನೇಜಸ್ ಮತ್ತು ಟ್ರಸ್ಟಿಗಳಾ ಸಿ|ಜಾನ್ ಮಾರ್ಟಿಸ್, ಶಾಖೆಯ ಪ್ರಾಂಶುಪಾಲರಾದ ಸಿ| ಅನ್ಸಿಲ್ಲಾ, ಶಿರ್ವ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ಗ್ರೇಸಿ ಕರ್ಡೋಜ, ಶಿರ್ವ ಮತ್ತು ಮೂಡುಬೆಳ್ಳೆ ಶಾಖೆಯ ಶಾಖಾ ವ್ಯವಸ್ಥಾಪಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹೆನ್ರಿ ಮಿನೇಜಸ್ ಸ್ವಾಗತಿಸಿದರು. ಶಿರ್ವ ಶಾಖಾ ವ್ಯವಸ್ಥಾಪಕಿ ಪ್ರಮಿಳಾ ಲೋಬೊ ವಂದಿಸಿದರು. ಶಾಲೆಯ ಶಿಕ್ಷಕ ಶಿಕ್ಷಕೇತರ ವರ್ಗ ಹಾಗೂ ಎರಡೂ ಶಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
