ಎಸ್ ಕೆ ಪಿ ಎ ಕಾಪು ವಲಯ : ಉಚಿತ ನಿಕಾನ್ ಕಾರ್ಯಗಾರ
Thumbnail
ಕಾಪು : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾಪು ವಲಯದ ವತಿಯಿಂದ ಕಾಪುವಿನ ಪ್ಯಾಲೇಸ್ ಗಾರ್ಡನ್ ಸಭಾ ಭವನದಲ್ಲಿ ನಿಕಾನ್ ಸಂಸ್ಥೆಯ ಉಚಿತ ಕಾರ್ಯಗಾರ ಜರಗಿತು. ಕಾರ್ಯಾಗಾರವನ್ನು ನಿಕೊನ್ ಸಂಸ್ಥೆಯ ಸೂರಜ್ ಪ್ರಭುರವರು ಉದ್ಘಾಟಿಸಿದರು. ನಿಕೊನ್ ಸಂಸ್ಥೆಯಿಂದ ಖ್ಯಾತ ಛಾಯಾಗ್ರಾಹಕ ಉಡುಪಿಯ ಫೋಕಸ್ ರಾಘುರವರು ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾಪು ಸಹಿತ ಬೇರೆ ಬೇರೆ ವಲಯಗಳ ನೂರಕ್ಕೂ ಅಧಿಕ ಛಾಯಾಗ್ರಹಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಕಾಪು ವಲಯಾಧ್ಯಕ್ಷ ವಿನೋದ್ ಕಾಂಚನ್, ಉಪಾಧ್ಯಕ್ಷ ಸಚಿನ್ ಉಚ್ಚಿಲ, ಗೌರವಾಧ್ಯಕ್ಷ ರವಿಕುಮಾರ್ ಕಟ್ಪಾಡಿ, ಕಾರ್ಯದರ್ಶಿ ರಾಜೇಶ್ ಶಂಕರಪುರ, ಕೋಶಾಧಿಕಾರಿ ರಾಘವೇಂದ್ರ ಭಟ್, ಛಾಯಾ ಕಾರ್ಯದರ್ಶಿ ಅರುಣ್ ಡಿಸೋಜ ಮತ್ತಿತರು ಉಪಸ್ಥಿತರಿದ್ದರು.
Additional image
24 Aug 2022, 07:41 PM
Category: Kaup
Tags: