ಆಗಸ್ಟ್ 27 : ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ರಾಜಕೀಯ ರಹಿತ ಪ್ರಾಮಾಣಿಕ ಸೇವೆ ನೀಡಿದ ಕೆ. ಆರ್. ಪಾಟ್ಕರ್ ಗೆ ಅಭಿನಂದನಾ ಕಾರ್ಯಕ್ರಮ
ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷರಾಗಿ ಅತ್ಯುತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸಿ ತಮ್ಮ ಅಧಿಕಾರ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶಿರ್ವ ಗ್ರಾಮದ ಅಭಿವೃದ್ಧಿಯ ಹರಿಕಾರ, ಜಾತಿ, ಧರ್ಮ, ರಾಜಕೀಯ ರಹಿತವಾಗಿ ಪ್ರಾಮಾಣಿಕ ಸೇವೆ ನೀಡಿದ ಕೆ. ಆರ್. ಪಾಟ್ಕರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಗಸ್ಟ್ 27, ಶನಿವಾರ ಸಂಜೆ 4ಕ್ಕೆ ಸಾರ್ವಜನಿಕ ಗಣೇಶೋತ್ಸವ ವೇದಿಕೆ, ಬಂಟಕಲ್ಲು ಇಲ್ಲಿ ನಡೆಯಲಿದೆ.
ಕೆ.ಆರ್. ಪಾಟ್ಕರ್ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಾದ ಬಸ್ಸು ನಿಲ್ದಾಣ, 4 ಸಣ್ಣ ಬಸ್ಸು ನಿಲ್ದಾಣಗಳು, 7 ಸಿಸಿ ಕ್ಯಾಮರಾ ಅಳವಡಿಕೆ, ಸ್ಮಶಾನ, ಧ್ವಜಸ್ತಂಭ, ಆರೋಗ್ಯ ಉಪಕೇಂದ್ರ, ಡಿಜಿಟಲ್ ಪಾವತಿ ವ್ಯವಸ್ಥೆ, ಸಂಜೀವೀನಿ ಸಂತೆಗಳ ಆರಂಭ, ಕಛೇರಿಯಲ್ಲಿ ಆಸನ ಸೌಲಭ್ಯ, ಬಸ್ಸು ನಿಲ್ದಾಣ ದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಬಸ್ಸು ವೇಳಾಪಟ್ಟಿ ವ್ಯವಸ್ಥೆ, ಗ್ರಾಮಸಭೆ ನೇರ ಪ್ರಸಾರ, 8 ಹೈ ಮಾಸ್ಟ್ ದೀಪಗಳು, ಎಸ್ ಎಲ್ ಆರ್ ಎಮ್ ಘಟಕಕ್ಕೆ 12 ಲಕ್ಷ ಮೌಲ್ಯದ ದೊಡ್ಡ ವಾಹನ ಇತ್ಯಾದಿ ಸುಮಾರು ಒಂದು ಕೋಟಿ ರೂಪಾಯಿಯಷ್ಟು ಮೌಲ್ಯದ ಕೆಲಸ ಕಾರ್ಯಗಳಾಗಿವೆ.
ಅದೇ ದಿನ ಸಂಜೆ 3 :30 ರಿಂದ ಭಕ್ತಿ ರಸಮಂಜರಿ ಪ್ರಕಾಶ್ ಸುವರ್ಣ ಮತ್ತು ಬಳಗ ಕಟಪಾಡಿ ಇವರಿಂದ, ಸಂಜೆ 4:15 ರಿಂದ ಶ್ರೀ ಕೆ ಆರ್ ಪಾಟ್ಕರ್ ರವರಿಗೆ ಅಭಿನಂದನ ಕಾರ್ಯಕ್ರಮ ನಡೆಯಲಿದೆ.
ಅತಿಥಿಗಳಾಗಿ ಎಂ ಎಸ್ ಆರ್ ಎಸ್ ಕಾಲೇಜು ಶಿರ್ವದ ಉಪ ಪ್ರಾಂಶುಪಾಲರಾದ ಪ್ರೊ. ಕೆ. ಜಿ. ಮಂಜುನಾಥ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ.
ಸಂಜೆ 5:30 ರಿಂದ ಕುಂದಾಪುರದ ಮೂರು ಮುತ್ತು ತಂಡದವರಿಂದ " ಹಾಸ್ಯ ಸಂಜೆ " ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
