ಬಂಟಕಲ್ಲು : ರಾಜಾಪುರ ಸಾರಸ್ವತ ಯುವ ವೃಂದದಿಂದ ಶಿಕ್ಷಕರ ದಿನಾಚರಣೆ
Thumbnail
ಬಂಟಕಲ್ಲು : ಇಲ್ಲಿನ ರಾಜಾಪುರ ಸಾರಸ್ವತ ಯುವ ವೃಂದದ ಆಶ್ರಯದಲ್ಲಿ ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರಿ ಹಿರಿಯ ಪ್ರಾರ್ಥಮಿಕ ಶಾಲೆಯ 6 ಮಂದಿ ಗೌರವ ಶಿಕ್ಷಕಿಯರು ಹಾಗೂ ಇಬ್ಬರು ಅಂಗನವಾಡಿ ಶಿಕ್ಷಕಿಯರನ್ನು ಶಿಕ್ಷಕರ ದಿನಾಚರಣೆ ಅಂಗವಾಗಿ ಗೌರವಿಸಲಾಯಿತು. ಸರ್ವೆಪಲ್ಲಿ ರಾಧಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಶಿಕ್ಷಕಿಯರನ್ನು ಗೌರವಪೂರ್ವಕವಾಗಿ ವೇದಿಕೆ ಬರಮಾಡಿಕೊಳ್ಳಲಾಯಿತು. ಯುವ ವೃಂದದ ಗೌರವಾಧ್ಯಕ್ಷ ಕೆ ಆರ್ ಪಾಟ್ಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕರ ದಿನಾಚರಣೆ ಬಗ್ಗೆ ಮಾತನಾಡಿ ಇಂದಿನ ದಿನಗಳಲ್ಲಿ ಕನ್ನಡ ಅನುದಾನಿತ ಶಾಲೆಗಳು ಗೌರವ ಶಿಕ್ಷಕಿಯರಿಂದಲೇ ನಡೆಯುತ್ತಿವೆ. ವಿದ್ಯಾರ್ಥಿಗಳಿದ್ದರೂ ಶಿಕ್ಷಕರ ನೇಮಕವಾಗುತ್ತಿಲ್ಲವಾದುದರಿಂದ ಅತೀ ಕಡಿಮೆ ಗೌರವಧನ ಪಡೆಯುತ್ತಿರುವ ಗೌರವ ಶಿಕ್ಷಕಿಯರನ್ನು ಇಂದು ಅಭಿನಂದಿಸಲು ರಾಜಾಪುರ ಸಾರಸ್ವತ ಯುವ ವೃಂದವು ಹೆಮ್ಮೆ ಪಡುತ್ತದೆ ಎಂದರು. ಗೌರವ ಶಿಕ್ಷಕಿಯರಾದ ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್ , ಶಾಲಿನಿ ಆಚಾರ್ಯ, ವಿನುತ ಆಚಾರ್ಯ, ಶ್ವೇತಾ ಪಾಟ್ಕರ್, ಸೌಮ್ಯ ಹಾಗೂ ಅಂಗನವಾಡಿ ಶಿಕ್ಷಕಿಯರಾದ ವಿನಯಾ ಹರೀಶ್, ಉಷಾ ಪಾಟ್ಕರ್ ರವರನ್ನು ಮುಖ್ಯ ಅತಿಥಿಗಳು ಶಾಲು ಹೊದಿಸಿ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು. ಯುವ ವೃಂದದ ವತಿಯಿಂದ ಶಾಲೆಗೆ ಸರ್ವೇಪಲ್ಲಿ ರಾಧಕೃಷ್ಣನ್ ರವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಬಂಟಕಲ್ಲು ದೇವಸ್ದಾನದ ಆಡಳಿತ ಮಂಡಳಿಯ ಮೋಕ್ತೇಸರರಾಗಿರುವ ಶಶಿಧರ ವಾಗ್ಲೆ, ಶಾಲಾ ಸಂಚಾಲಕ ಜಯರಾಮ ಪ್ರಭು, ಆಡಳಿತ ಮಂಡಳಿಯ ಉಮೇಶ್ ಪ್ರಭು, ಸುರೇಂದ್ರ ನಾಯಕ್ ಹಳೇ ವಿದ್ಯಾರ್ಥಿ ರಿಚಾರ್ಡ್ ಡಿ'ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಾಶಯ ಕೋರಿದರು. ಶಿಕ್ಷಕಿಯರಿಗೆ ಹಾಡು, ಭಾಷಣ ಸ್ಪರ್ಧೆಯನ್ನು ನಡೆಸಿ ಬಹುಮಾನವನ್ನು ವಿತರಿಸಲಾಯಿತು. ಯುವ ವೃಂದದ ಉಪಾಧ್ಯಕ್ಷ ಅಭಿಷೇಕ್ ನಾಯಕ್ ಹಾಗೂ ವಿಶ್ವನಾಥ ಬಾಂದೇಲ್ಕರ್, ಸಂಕೇತ್, ಸುಮಲತ, ಪ್ರಶಾಂತ್, ಸುಬ್ರಹ್ಮಣ್ಯ ವಾಗ್ಲೆ ಉಪಸ್ಥಿತರಿದ್ದರು. ಯುವ ವೃಂದದ ಅಧ್ಯಕ್ಷ ರಾಘವೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಅನಂತರಾಮ ವಾಗ್ಲೆ ವಂದಿಸಿದರು.
Additional image Additional image
05 Sep 2022, 07:43 PM
Category: Kaup
Tags: