ಶಿರ್ವ : 14 ವರ್ಷಗಳ ಸೇವಾ ಇತಿಹಾಸ ಹೊಂದಿರುವ ಪಾದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಲದೂರು ವೆಲ್ಫೇರ್ ಎಸೋಸಿಯೇಶನ್ (ರಿ) ಇದರ 15ನೇ ವರ್ಷದ ನೂತನ ಅಧ್ಯಕ್ಷರಾಗಿ ಕವಿ, ನಾಟಕಕಾರ, ರಂಗ ನಿರ್ದೇಶಕ,ಯಕ್ಷಕಲಾವಿದ, ಸಾಮಾಜಿಕ ಕಾರ್ಯಕರ್ತ ಅಶೋಕ್ ಕುಮಾರ್ ವಲದೂರು ಆಯ್ಕೆಯಾಗಿದ್ದಾರೆ.
ಮುಂಬಯಿಯಲ್ಲಿ ತೆರಿಗೆ ಸಲಹೆಗಾರರಾಗಿ ವೃತ್ತಿ ನಿರತರಾಗಿದ್ದು, ಮುಂಬಯಿ ಕನ್ನಡ,ತುಳು ವೆಲ್ಫೇರ್ ಎಸೋಸಿಯೇಶನ ಇದರ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇತರ ಪದಾಧಿಕಾರಿಗಳು : ಗೌರವ ಅಧ್ಯಕ್ಷರು:-ಶಾಂತರಾಜ್ ವೈ.ಶೆಟ್ಟಿ, ಕಾರ್ಯದರ್ಶಿ- ಮನೋಜ್ ಎಚ್.ಶೆಟ್ಟಿ, ಜೊತೆ ಕಾರ್ಯದರ್ಶಿ: ಸುಕೇಶ್ ಕಂಪ್ಯಾಕರ್, ಕೋಶಾಧಿಕಾರಿ: ಅಜಿತ್ ಪೂಜಾರಿ ಹಾಗೂ ನಿಕಟಪೂರ್ವ ಪದಾಧಿಕಾರಿಗಳಾದ ಲೀಲಾಧರ ಶೆಟ್ಟಿ ವಲದೂರು, ಪ್ರಸಾದ್ ಶೆಟ್ಟಿ ವಲದೂರು, ಸುಕೇಶ್ ಪೂಜಾರಿ ಗೌರವ ಸಲಹರಗಾರರಾಗಿದ್ದಾರೆ.
ಎಸೋಸಿಯೇಶನ್‌ಗೆ ಸ್ವಂತ ಕಾರ್ಯಾಲಯ ಸಹಿತ ಸಮುದಾಯ ಭವನದ ನಿರ್ಮಾಣ, ಕೃಷಿ, ಹೈನುಗಾರಿಕೆ,ರಕ್ತದಾನ ಶಿಬಿರ ಸಹಿತ ಮಕ್ಕಳಿಗೆ ರಂಗಕಲೆ, ಸಾಹಿತ್ಯ, ಆರೋಗ್ಯಪೂರ್ಣ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಲ್ಲದೆ, ಇತರ ಸಂಘಟನೆಗಳು ಮತ್ತು ಜನಪ್ರತಿನಿಧಿಗಳ ಸಹಕಾರದೊಂದಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಈ ಭಾಗದ ನಾಗರಿಕರಿಗೆ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಅಯೋಜನೆ ಮಾಡುವ ಸದುದ್ದೇಶವನ್ನು ಇಟ್ಟುಕೊಂಡಿದ್ದಾರೆ.
