ಬಿ.ಜೆ.ಎಂ ಮಜೂರು ಮಸ್ಜಿದ್ ಆವರಣದಲ್ಲಿ ರೈಲ್ವೆ ಇಲಾಖೆಯಿಂದ ಜನಜಾಗೃತಿ ಮಾಹಿತಿ
Thumbnail

ಕಾಪು : ಕೊಂಕಣ್ ರೈಲ್ವೆ ಚೀಫ್ ಕಮಿಷನರ್  ಅಭಿಷೇಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಉಡುಪಿ ರೈಲ್ವೆ ಸ್ಟೇಷನ್‌ನ ಇನ್ಸ್‌ಪೆಕ್ಟರ್ ಸಂಜಯ್ ವಾತ್ಸ್ ಹಾಗೂ ಅವರ ಸಿಬ್ಬಂದಿಗಳು ಬದ್ರಿಯಾ ಜುಮ್ಮಾ ಮಸ್ಜಿದ್, ಮಜೂರು ಭೇಟಿ ನೀಡಿ ರೈಲುಗಳ ಮೇಲೆ ಕಲ್ಲು ತೂರಾಟ ತಡೆಯುವ ಕುರಿತು ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಡಾ. ಫಾರೂಕ್ ಚಂದ್ರನಗರ, ಮಸ್ಜಿದ್‌ನ ಸದಸ್ಯರು ಹಾಗೂ ಧಾರ್ಮಿಕ ಕೇಂದ್ರದ ನಿರ್ವಹಣಾ ಸಮಿತಿಯವರು ಉಪಸ್ಥಿತರಿದ್ದರು.
    

14 May 2026, 09:57 AM
Category: Kaup
Tags: