ಪಾದೂರು ರೋಟರಿ ಸಮುದಾಯ ದಳ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇಬ್ಬರು ಶಿಕ್ಷಕರಿಗೆ ಸನ್ಮಾನ
ಕಾಪು : ಪಾದೂರು ರೋಟರಿ ಸಮುದಾಯ ದಳ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ರಾಜ್ಯೋತ್ಸವ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪಾದೂರು ಯುಬಿಎಂಸಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಆಗಿದ್ದ ಶೈಲಿ ಪ್ರೇಮ ಕುಂದರ್ ಹಾಗೂ ಕಟಪಾಡಿ ಎಸ್ ವಿ ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾಗಿರುವ ಪಾದೂರಿನ ನಿವಾಸಿ ಜ್ಯೋತಿಷ್ಯ ಶಾಸ್ತ್ರಜ್ಞ ಸುಬ್ರಹ್ಮಣ್ಯ ತಂತ್ರಿ ಅವರನ್ನು ನಿಕಟಪೂರ್ವ ಎಜಿ ರೊಟೇರಿಯನ್ ಪಿಎಚ್ ಎಫ್ ಡಾಕ್ಟರ್ ಅರುಣ್ ಹೆಗ್ಡೆಯವರು ಸನ್ಮಾನಿಸಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾದೂರು ಮಹಿಳಾ ಮಂಡಳದ ಅಧ್ಯಕ್ಷೆ ಜಯಲಕ್ಷ್ಮಿ ಆಳ್ವ ಹಾಗೂ ಶಿರ್ವ ರೋಟರಿ ಪೂರ್ವ ಅಧ್ಯಕ್ಷರಾಗಿದ್ದ ಮೈಕಲ್ ಮಥಾಯಸ್, ಆರ್ ಸಿಸಿ ಯ ಅಧ್ಯಕ್ಷ ಪ್ರಸಾದ್ ಆಚಾರ್ಯ ಹಾಗೂ ಕಾರ್ಯದರ್ಶಿ ಸಂತೋಷ್ ಆಚಾರ್ಯ ಹಾಗೂ ಆರ್ ಸಿಸಿಯ ಸಭಾಪತಿ ಜೆ ಕೆ ಆಳ್ವ ಅವರು ಉಪಸ್ಥಿತರಿದ್ದರು.
ಸಭೆಯಲ್ಲಿ ಪಾದೂರು ಅಂಗನವಾಡಿ ಶಿಕ್ಷಕಿಯಾದ ವತ್ಸಲ ಶೆಟ್ಟಿ ಹಾಗೂ ಇನ್ನೋರ್ವ ಶಿಕ್ಷಕಿಯಾದ ಪ್ರಫುಲ್ಲಾ ಆಚಾರ್ಯ ಇವರನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ಪೂರ್ಣಿಮಾ ಕೆ ಶೆಟ್ಟಿ, ಪ್ರಕಾಶ್ ಆಚಾರ್ಯ, ಮನೋಜ್ ಶೆಟ್ಟಿ , ಜೋಯಲ್ ಮಥಾಯಸ್ ಹಾಗೂ ಇತರರು ಉಪಸ್ಥಿತರಿದ್ದರು.
