ಕ್ರಿಯೇಟಿವ್‌ ಕಾಲೇಜಿನ ಪ್ರಥಮ ವರ್ಷದ ನೀಟ್‌ ಫಲಿತಾಂಶದಲ್ಲಿಯೇ ವಿದ್ಯಾರ್ಥಿಗಳ ಅಮೋಘ ಸಾಧನೆ
Thumbnail
ಕಾರ್ಕಳ : ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ನೀಟ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪಿ ಯು ಕಾಲೇಜಿನ ವಿದ್ಯಾರ್ಥಿಗಳಾದ ರಾಘವೇಂದ್ರ ತಾಳಿಕೋಟಿ (646), ಸಾತ್ವಿಕ್‌ ಶ್ರೀಕಾಂತ್‌ ಹೆಗಡೆ (641), ಸೋಹನ್‌ ಎಸ್‌ ನೀಲಕರಿ (598), ಸುದೀಪ್‌ ಅಸಂಗಿಹಾಲ್‌ (552), ಹಾಸನದ ವಿಕಾಸ್‌ ಗೌಡ ಎಂ (608) ಅಂಕಗಳನ್ನು ಗಳಿಸಿದ್ದಾರೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಅತ್ಯಂತ ಅನುಭವಿ ಉಪನ್ಯಾಸಕರುಗಳೇ ಸೇರಿ ನಿರ್ಮಿಸಿರುವ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಿರಂತರವಾಗಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿ ನಡೆಯುತ್ತಿದೆ. ಕಾಲೇಜಿನ ಪ್ರಥಮ ವರ್ಷದ ನೀಟ್‌ ಫಲಿತಾಂಶದಲ್ಲಿಯೇ ಪರೀಕ್ಷೆಗೆ ಕುಳಿತ 88 ವಿದ್ಯಾರ್ಥಿಗಳಲ್ಲಿ 76 ವಿದ್ಯಾರ್ಥಿಗಳು ಅರ್ಹತೆಗಳಿಸಿದ್ದು, 23 ವಿದ್ಯಾರ್ಥಿಗಳು 400 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳು ಈ ಮೊದಲು ಪ್ರಕಟಗೊಂಡ JEE, CET, RIE, NDA, NATA, C.A ಮತ್ತು C.S.E.E.T, ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ದಾಖಲಿಸಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ನೀಟ್‌ ಸಂಯೋಜಕರಾದ ಲೋಹಿತ್‌ ಎಸ್‌ ಕೆ, ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
08 Sep 2022, 06:08 PM
Category: Kaup
Tags: