ಕಾಪು : ವಿವಿಧ ಬೇಡಿಕೆಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದ ಟೈಲರ್ಸ್ ಅಸೋಸಿಯೇಷನ್
Thumbnail
ಕಾಪು : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿಯಿಂದ ಸೆಪ್ಟೆಂಬರ್ 9ರಂದು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರ ಮನೆಗೆ ಭೇಟಿ ನೀಡಿ ಟೈಲರ್ಸ್ ಗಳ ಬೇಡಿಕೆಗಳನ್ನು ಮನವಿ ಮೂಲಕ ನೀಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಬಿ ಕೆ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾದ ರಮಾನಂದ್ ಅತ್ತೂರ್ ಹಾಗೂ ಕೋಶಾಧಿಕಾರಿ ಸುರೇಶ ಶೆಟ್ಟಿಗಾರ್ ಹಾಗೂ ಸಹ ಕಾರ್ಯದರ್ಶಿ ನಾರಾಯಣ ಅಂಚನ್ ಹಾಗೂ ಕಾಪು ವಲಯ ಸಮಿತಿಯ ಅಧ್ಯಕ್ಷರಾದ ಸುರೇಖಾ ಶೈಲೇಶ್ ಹಾಗೂ ಬೆಳ್ಮಣ್ ವಲಯದ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್ ಹಾಗೂ ಕ್ಷೇತ್ರದ ಮಾಜಿ ಅಧ್ಯಕ್ಷರು ಆನಂದ್ ಪುತ್ರನ್ ಹಾಗೂ 5 ವಲಯದ ಸದಸ್ಯರುಗಳು ಉಪಸ್ಥಿತರಿದ್ದರು.
09 Sep 2022, 06:29 PM
Category: Kaup
Tags: