ಮೂಳೂರಿನಲ್ಲಿ ಪಾದಾಚಾರಿಗೆ ಸ್ಕೂಟಿ ಡಿಕ್ಕಿ ; ಸ್ಕೂಟಿ ಸವಾರ ಸಾವು, ಪಾದಚಾರಿಗೆ ಗಾಯ
Thumbnail
ಕಾಪು : ಮಲ್ಪೆಯಿಂದ ಮೀನಿನ ಕೆಲಸ ಮುಗಿಸಿ ಸ್ಕೂಟಿಯಲ್ಲಿ ಬರುತ್ತಿದ್ದಾಗ ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಾದಚಾರಿಯೋರ್ವರು ಅಡ್ಡ ಬಂದ ಪರಿಣಾಮ, ಸ್ಕೂಟಿ ರಸ್ತೆಗೆ ಬಿದ್ದು, ಸವಾರ ಮೃತ ಪಟ್ಟು, ಪಾದಾಚಾರಿಯ ಕಾಲು ಮುರಿತ ಗೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಮೃತ ಸುರೇಶ್ ರವರು ತನ್ನ ಸಹೋದ್ಯೋಗಿ ಹರೀಶ್ ರವರೊಂದಿಗೆ ಮಲ್ಪೆಯಿಂದ ಮೀನಿನ ಕೆಲಸ ಮುಗಿಸಿ ಉಚ್ಚಿಲದ ತಮ್ಮ ಮನೆಗೆ ಬರುತ್ತಿದ್ದಾಗ ಪಾದಚಾರಿ ಈರಯ್ಯ ಎಂಬವರಿಗೆ ಸ್ಕೂಟಿ ಡಿಕ್ಕಿ ಹೊಡೆದಿದೆ. ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಸುರೇಶ್ ವೃತ್ತಪಟ್ಟಿದ್ದಾರೆ. ಹರೀಶ್ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ ಪಾದಾಚಾರಿ ಈರಯ್ಯನವರ ಕಾಲು ಮುರಿತಗೊಂಡಿದೆ. ಕಾಪು ಪೊಲೀಸ್ ಠಾಣಾಧಿಕಾರಿ ಶ್ರೀಶೈಲ ಮುರುಗೋಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
09 Sep 2022, 06:54 PM
Category: Kaup
Tags: