ಶಿರ್ವ : ಆರೋಗ್ಯ ಮಾತಾ ದೇವಾಲಯದಲ್ಲಿ ಮೊಂತಿ ಫೆಸ್ಟ್ ಆಚರಣೆ
ಶಿರ್ವ : ಉಡುಪಿ ಪ್ರಾಂತ್ಯದಲ್ಲಿಯೇ ಅತಿ ದೊಡ್ಡದಾದ ಚರ್ಚ್ ಎಂಬ ಹೆಗ್ಗಳಿಕೆಯ ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಗುರುವಾರ ಕನ್ಯಾಮರಿಯಮ್ಮನ ಜನ್ಮದಿನ ಮೋಂತಿ ಪೇಸ್ಟ್ ಅನ್ನು ಕ್ರೈಸ್ತ ಬಾಂಧವರು ಭಯ ಭಕ್ತಿಯಿಂದ ಆಚರಿಸಿದರು.
ಪುಟ್ಟ ಮಕ್ಕಳು ಕನ್ಯಾಮರಿಯಮ್ಮನ ಮೂರ್ತಿಗೆ ಹೂಗಳನ್ನು ಸಮರ್ಪಿಸಿದ ಬಳಿಕ ಆಯಾ ಗ್ರಾಮದ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಮೆರವಣಿಗೆಯಲ್ಲಿ ಚರ್ಚು ಒಳಗೆ ಕೊಂಡೊಯ್ದು ಬಳಿಕ ಪವಿತ್ರ ಬಲಿ ಪೂಜೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.
ಪವಿತ್ರ ಬಲಿ ಪೂಜೆಯ ಬಳಿಕ ಪ್ರತಿ ಕುಟುಂಬಕ್ಕೆ ತೆನೆ, ಕಬ್ಬು ಹಾಗೂ ಸಿಹಿ ತಿಂಡಿ ವಿತರಿಸಲಾಯಿತು.
ಈ ಸಂದರ್ಭ ಪ್ರಧಾನ ಗುರುಗಳಾದ ರೆ. ಫಾ ಡಾ. ಲೆಸ್ಲಿ ಡಿಸೋಜಾ ರವರು ಬಲಿ ಪೂಜೆ ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭ ಫಾದರ್ ರೋಲ್ವಿನ್ ಅರ್ಹಾನಾ, ಫಾದರ್ ನೆಲ್ಸನ್ ಪೆರಿಸ್, ಡೆಕೋನ್ ಜಾನ್ಸನ್ ಪಿಂಟೊ, ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.
೧೫೦೦ ಅಧಿಕ ಕ್ರೈಸ್ತ ಬಾಂಧವರು ಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
