ಪಂಚ ಪವಿತ್ರ ಗಿಡ ವಿತರಣಾ ಅಭಿಯಾನ
Thumbnail
ಉಡುಪಿ : ನಮ್ಮ ಹಿರಿಯರು ಗಿಡಗಳ ಮೂಲಕ ಧಾಮಿ೯ಕ ಭಾವನೆಗಳನ್ನು ಮೂಡಿಸಿದರ ಫಲವಾಗಿ ಇಂದು ಹಲವಾರು ಗಿಡ ಮರಗಳು ಉಳಿಯಲು ಕಾರಣವಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಸೆಪ್ಟೆಂಬರ್ 10 ರಂದು ಭಾರತೀಯ ಜನೌಷಧಿ ಕೇಂದ್ರ ಅಜ್ಜರಕಾಡು ಮತ್ತು ಜಯಂಟ್ಸ್ ಗ್ರೂಫ್ ಆಫ್ ಬ್ರಹ್ಮಾವರ ಇದರ ಆಶ್ರಯದಲ್ಲಿ ನಡೆದ ಧಾಮಿ೯ಕ ಕೇಂದ್ರಗಳು, ದೇವಾಲಯಗಳಿಗೆ ವಿತರಿಸುವ ಪಂಚ ಪವಿತ್ರ ಗಿಡ ವಿತರಣಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದಭ೯ದಲ್ಲಿ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಕೇಂದ್ರ ಸದಸ್ಯ ದಿನಕರ ಅಮೀನ್, ಲಕ್ಮೀಕಾಂತ್ ಬೆಸ್ಕೂರು, ಅಣ್ಣಯ್ಯದಾಸ್, ಶ್ರೀನಾಥ್ ಕೋಟ, ಇಕ್ಬಾಲ್ ಮನ್ನಾ, ಮುಂತಾದವರು ಉಪಸ್ಥಿತರಿದ್ದರು. ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕುಡೆ ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.
11 Sep 2022, 09:29 AM
Category: Kaup
Tags: