ಕಾಪು : ಅಕ್ಷಯಧಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ - ವಾರ್ಷಿಕ ಮಹಾಸಭೆ
ಕಾಪು : ಪರಿಸರದ ಜನಪ್ರಿಯ ಆರ್ಥಿಕ ಸಂಸ್ಥೆ ಅಕ್ಷಯಧಾರ ಕ್ರೆಡಿಟ್ ಸೊಸೈಟಿ ,ಇದರ 2021-22 ರ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 13 ರಂದು ಬೆಳ್ಳಿಗ್ಗೆ, ಕಾಪು ಭಾಸ್ಕರ ಸೌಧದಲ್ಲಿ ಅಧ್ಯಕ್ಷರಾದ ಲವ.ಎನ್.ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2022-23 ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಸಭೆಯಲ್ಲಿ ಮಂಜೂರು ಮಾಡಲಾಯಿತು. ಈ ಸಂಧರ್ಭದಲ್ಲಿ ವಾಣಿಜ್ಯ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಅಂಕದೊಂದಿಗೆ ಉತೀರ್ಣಳಾದ ಕೀರ್ತನ ಯು.ಕುಂದರ್, ಬಿ.ಎಸ್.ಸಿ.ಯಲ್ಲಿ ಪ್ರಥಮ ರಾಂಕ್ ಪಡೆದ ಶ್ರಾವಿಕ ಶೆಟ್ಟಿ, ಎಸ್.ಎಸ್.ಎಲ್ ಸಿ.ಯಲ್ಲಿ ಪ್ರಥಮ ಶೇಣಿಯಲ್ಲಿ ತೇರ್ಗಡೆಯಾದ ಕೃತಿ.ಎಸ್.ಆಚಾರ್ಯ ಹಾಗೂ ಹೈದರಾಬಾದ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿಯಾ ಪೂಜಾರಿಯನ್ನು ಸನ್ಮಾನಿಸಲಾಯಿತು. ಸಂಸ್ಥೆಯೊಂದಿಗೆ ಆರಂಭದ ದಿನದಿಂದಲೂ ಆರ್ಥಿಕ ವ್ಯವಹಾರ ಮಾಡುತ್ತಿರುವ, ಕೊಡುಗೈ ದಾನಿ ಚಂದ್ರ ಜಯ ಬಂಗೇರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸದಸ್ಯರ ಪರವಾಗಿ ಸೀತಾಲಕ್ಷ್ಮಿ ವ್ಯಾಸ ರಾವ್, ವಿಠಲ್ ರಾವ್, ಸುಂದರ ಸುವರ್ಣ, ಸೀತಾರಾಮ ಸಾಲ್ಯಾನ್ ಮಾತನಾಡಿ ಸಲಹೆ,ಸೂಚನೆ ನೀಡಿದರು. ಲೆಕ್ಕ ಪರಿಶೋಧಕರಾದ ಅಜಿತ್ ಕುಮಾರ್ ಸೊಸೈಟಿಯ ಒಟ್ಟು ವ್ಯವಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಲಹೆ ನೀಡಿದರು. ಅಧ್ಯಕ್ಷೀಯ ಭಾಷಣ ಮಾಡಿದ ಲವ ಕರ್ಕೇರ "ಕಳೆದ 13 ವರ್ಷಗಳಿಂದ ನಮ್ಮ ಆರ್ಥಿಕ ಸಂಸ್ಥೆ ಶೇರುದಾರರ, ಗ್ರಾಹಕರ,ಠೇವಣಿದಾರರ ಹಿತೆಷಿಗಳ ಸಹಕಾರದಿಂದ ಮುನ್ನಡೆಯುತ್ತಿದ್ದು, ಸಂಸ್ಥೆಯು ಬಲಿಷ್ಠವಾಗಿ ಬೆಳೆಯುವಲ್ಲಿ ಮುಂದಕ್ಕೂ ಎಲ್ಲರೂ ಸ್ಪಂದಿಸಬೇಕು.ನಮ್ಮ ಸಂಸ್ಥೆ ಗ್ರಾಹಕರಿಗೆ, ಸಣ್ಣ ಉದ್ದಿಮೆದಾರರಿಗೆ ವಿವಿಧ ಸಾಲ, ಸೌಲಬ್ಯಗಳನ್ನು ನೀಡುತ್ತಿದ್ದು, ಇದರ ಪ್ರಯೋಜನವನ್ನು ಪಡೆಯುವುದರೊಂದಿಗೆ ತಮ್ಮ ಉದ್ದಿಮೆಯ ಜತೆ ಅಕ್ಷಯಧಾರ ಸೊಸೈಟಿಯನ್ನು ಬೆಳೆಸಬೇಕು" ಎಂದರು.
ನಿರ್ದೇಶಕ ಶಿವರಾಮ ಆಚಾರ್ಯ ಸ್ವಾಗತಿಸಿದರು. ಕಾರ್ಯಧರ್ಶಿ ಅಮಿತಾ ದೇವದಾಸ್ ವಾರ್ಷಿಕ ವರದಿ ವಾಚಿಸಿದರೆ, ನಿರ್ದೇಶಕ ಜಗಧೀಶ ಮೆಂಡನ್ ಲೆಕ್ಕಪತ್ರ ಮಂಡಿಸಿದರು.
ಸೊಸೈಟಿಯ ಉಪಾಧ್ಯಕ್ಷ ಮೊಹಮ್ಮದ್ ಇರ್ಫಾನ್, ನಿರ್ದೇಶಕರುಗಳಾದ ವಿಜಯ ಶೆಟ್ಟಿ, ಶಿವರಾಂ ಆಚಾರ್ಯ, ಉತ್ತಮ ಕುಮಾರ್, ದೀಪಾಲತಾ, ವಿಮಲ ದೇವಾಡಿಗ, ಯೋಗೇಶ್ ಪೂಜಾರಿ ಮಲ್ಲಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಯಾಂಕ್ ನ ಸಿಬ್ಬಂದಿಗಳಾದ ಐರ್ವಿನ್ ಸೊನ್ಸ್ , ಸೌಮ್ಯ ಶೆಟ್ಟಿ ಸಹಕರಿಸಿದರು. ಮೊಹಮದ್ ಸಾದಿಕ್ ಕೊನೆಯಲ್ಲಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಈ ಬಾರಿಯ ಮಹಾಸಭೆಯಲ್ಲಿ ಶೇರುದಾರರು, ಗ್ರಾಹಕರು, ಪಿಗ್ಮಿ ಏಜೆಂಟರು ಮತ್ತಿತರರು ಉಪಸ್ಥಿತರಿದ್ದರು.
