ಕಾಪು : ಇಬ್ಬರು ರಿಕ್ಷಾ ಚಾಲಕರಿಂದ ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಉಚಿತ ಸೇವೆ
ಕಾಪು : ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಕಾಪುವಿನ ಇಬ್ಬರು ರಿಕ್ಷಾ ಚಾಲಕರು ಇಂದು ಉಚಿತ ಸೇವೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಶನಿವಾರ ಕಾಪುವಿನ ರಿಕ್ಷಾ ಚಾಲಕರಾದ ಚಂದ್ರ ಮಲ್ಲಾರು ಹಾಗೂ ನಝೀರ್ ರವರು ಉಚಿತ ಆಟೋರಿಕ್ಷಾ ಸೇವೆ ನೀಡಿದರು.
ಕಾರ್ಯಕ್ರಮಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್ ಚಾಲನೆ ನೀಡಿದರು. ಉಚಿತ ಸೇವೆಯು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7ರವರೆಗೆ ನಡೆಯಲಿದ್ದು, ಐದು ಕಿಲೋಮೀಟರ್ ವರೆಗೆ ಪ್ರಯಾಣಿಕರಿಗೆ ಉಚಿತ ಸೇವೆ ನೀಡಿದರು.
ಈ ಸಂದರ್ಭ ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಕಾರ್ಯದರ್ಶಿ ಗೋಪಾಲಕೃಷ್ಣರಾವ್, ಶಿಲ್ಪ ಜಿ ಸುವರ್ಣ, ಪುರಸಭಾ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
