ಇನ್ನಂಜೆ : ರೋಟರಿ ಸಮುದಾಯ ದಳ, ಗ್ರಾಮ ಪಂಚಾಯತ್ ಜಂಟಿಯಾಗಿ ರಸ್ತೆ ದುರಸ್ತಿ ಕಾರ್ಯ
Thumbnail
ಇನ್ನಂಜೆ : ರೋಟರಿ ಸಮುದಾಯ ದಳ ಇನ್ನಂಜೆ ಮತ್ತು ಇನ್ನಂಜೆ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಇನ್ನಂಜೆ ಶಂಕರಪುರ ರಸ್ತೆ ಮತ್ತು ಮಾರ್ಕೆಟ್ ರೋಡ್ ರಸ್ತೆಯಲ್ಲಿ ಮಳೆಯ ರಭಸದಿಂದ ಉಂಟಾಗಿರುವ ಹೊಂಡಗಳನ್ನು ಮುಚ್ಚಲಾಯಿತು. ಈ ರಸ್ತೆ ದುರಸ್ತಿ ಕಾರ್ಯದಲ್ಲಿ ರಾಜೇಶ್ ರಾವ್ ಪಾಂಗಾಳ, ಶ್ರೀನಿವಾಸ್ ತಂತ್ರಿ ಮಡುಂಬು, ಸಂಜಿತ್ ಶೆಟ್ಟಿ ಕಲ್ಯಾಲು, ಚಂದ್ರೇಶ್ ಇನ್ನಂಜೆ ಸಹಕರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಆಚಾರ್ಯ, ಸದಸ್ಯರುಗಳಾದ ಪುಷ್ಪ, ಅನಿತಾ ಮಾಥಾಯಸ್,ರೋಟರಿ ಸಮುದಾಯ ದಳ ಇನ್ನಂಜೆ ಅಧ್ಯಕ್ಷ ದಿವೇಶ್ ಶೆಟ್ಟಿ, ಪೂರ್ವ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸಭಾಪತಿ ಮಾಲಿನಿ ಇನ್ನಂಜೆ, ಸದಸ್ಯರುಗಳಾದ ವಜ್ರೇಶ್ ಆಚಾರ್ಯ, ಸಂದೀಪ್ ಸುವರ್ಣ, ಜೇಸುದಾಸ್ ಸೋನ್ಸ್, ಸುನೀಲ್ ಸಾಲ್ಯಾನ್, ಬಿಲ್ಲವ ಸಂಘ ಇನ್ನಂಜೆ ಅಧ್ಯಕ್ಷ ಸದಾಶಿವ ಪೂಜಾರಿ, ಪಂಚಾಯತ್ ಸಿಬ್ಬಂದಿ ರೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
18 Sep 2022, 06:54 PM
Category: Kaup
Tags: