ರೋಟರಿ ಶಂಕರಪುರ : ಇಂಟರಾಕ್ಟ್ ಕ್ಲಬ್ ಪದ ಪ್ರದಾನ
Thumbnail
ಕಾಪು : ರೋಟರಿ ಶಂಕರಪುರದ ಅಂಗ ಸಂಸ್ಥೆಗಳಾದ ಎಸ್ ವಿ ಎಚ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಹಾಗೂ ಎಸ್ ವಿ ಎಚ್ ಕನ್ನಡ ಮೀಡಿಯಂ ಇಂಟರಾಕ್ಟ್ ಕ್ಲಬ್ ಪದ ಪ್ರದಾನ ಸಮಾರಂಭವನ್ನು ವಲಯ 5 ರ ಇಂಟರಾಕ್ಟ್ ವಲಯ ಸಂಯೋಜಕರಾದ ಜಯಕೃಷ್ಣ ಆಳ್ವಾರವರು ಇಂಟರಾಕ್ಟ್ ಅಧ್ಯಕ್ಷರುಗಳಾದ ಪಾವನ, ಪ್ರಜ್ಞಾ ಹಾಗೂ ಕಾರ್ಯದರ್ಶಿಗಳಾದ ಕಾರ್ತಿಕ್, ಶ್ರೇಯ ರವರಿಗೆ ಪದಪ್ರದಾನವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಇಂಟರಾಕ್ಟ್ ಟೀಚರ್ ಕೋ ಆರ್ಡಿನೇಟರ್ ಗಳಾದ ದೀಪ್ತಿ, ಅನಿತಾ ಹಾಗೂ ಶಾಲೆಯ ಆಡಳಿತ ಅಧಿಕಾರಿಯಾದ ಅನಂತಮುಡಿತಾಯ ಎಸ್ ವಿ ಎಚ್ ಇಂಗ್ಲಿಷ್ ಮೀಡಿಯಂ ಮುಖ್ಯೋಪಾಧ್ಯಾಯರಾದ ಸುಷ್ಮಾ, ರೋಟರಿಯ ಅಧ್ಯಕ್ಷರಾದ ಗ್ಲಾಡಸನ್ ಕುಂದರ್, ಕಾರ್ಯದರ್ಶಿಯಾದ ಸಿಲ್ವಿಯಾ ಕಸ್ಟಲೀನೋ , ಜೊತೆ ಕಾರ್ಯದರ್ಶಿ ಮಾಲಿನಿ ಶೆಟ್ಟಿ, ಶಾಲಾ ಶಿಕ್ಷಕಿಯರು, ಇಂಟರಾಕ್ಟ್ ಮಕ್ಕಳು ಉಪಸ್ಥಿತರಿದ್ದರು.
21 Sep 2022, 11:54 PM
Category: Kaup
Tags: