ಕೊಂಕಣಿ ನಾಟಕ ಸಭಾ : ಕಿರು ನಾಟಕ ಸ್ಫರ್ಧೆಯಲ್ಲಿ ಶಂಕರಪುರ ಕಲಾರಾಧನ್ ಪ್ರಥಮ ಸ್ಥಾನ
Thumbnail
ಕಾಪು : ಇತ್ತೀಚೆಗೆ ಮಂಗಳೂರಿನ ಕೊಂಕಣಿ ನಾಟಕ ಸಭಾ ನಡೆಸಿದ ಕಿರು ನಾಟಕ ಸ್ಫರ್ಧೆಯಲ್ಲಿ ಭಾಗವಹಿಸಿದ ಶಂಕರಪುರದ ಇಗರ್ಜಿಯ ಕಲಾರಾಧನ್ ಸಂಘಟನೆಯ ವೆಚಿಕ್ ಪೂತ್ ಪ್ರಥಮ ಸ್ಥಾನವನ್ನು ಪಡೆದಿದೆ. ವಾಲ್ ಸ್ಟನ್ ಡೇಸ ರಚಿಸಿದ ಈ ಕಿರು ನಾಟಕವನ್ನು ಕಲಾ ಚತುರ ಗಣೇಶ್ ರಾವ್ ಎಲ್ಲೂರುರವರು ನಿರ್ದೇಶಿಸಿದ್ದಾರೆ.ಅನಿಲ್ಡಾ ನೊರೊನ್ನಾ,ಶ್ರಾಯನ್ ಲೋಬೊ,ಅನ್ಸಿಲ್ಲಾ ಕೊರೆಯಾ,ನೊಯೆಲ್ ಡಿಸಿಲ್ವಾ ಮತ್ತು ವಾಲ್ ಸ್ಟನ್ ಡೇಸ ಅಭಿನಯಿಸಿ,ಜೀವನ್ ಮತ್ತು ಕ್ಲೈವ್ ಸಂಗೀತ ನಿರ್ವಹಿಸಿದ್ದಾರೆ. ವ್ಯವಸ್ಥಾಪಕರಾಗಿ ಪೀಟರ್ ಮಾರ್ಟಿಸ್ ರವರು ಸಹಕರಿಸಿದರು. ಪ್ರಸ್ತುತ ದಿನಗಳಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗಿ ಕುಟುಂಬ ಮತ್ತು ಸಮಾಜಕ್ಕೆ ಕಂಟಕರಾಗಿ ಬದುಕುವ ಯುವಜನರ ಕಥಾ ವಸ್ತುವಿರುವ ಈ ಕಿರು ನಾಟಕ ಜನ ಮೆಚ್ಚುಗೆಯನ್ನು ಪಡೆಯಿತು.
25 Sep 2022, 10:20 PM
Category: Kaup
Tags: