ಕಳತ್ತೂರು : ಅಂಗನವಾಡಿಯಲ್ಲಿ ಪೋಷಣೆ ಅಭಿಯಾನ ಕಾರ್ಯಕ್ರಮ
ಕಳತ್ತೂರು : ಗ್ರಾಮದ 3 ಅಂಗನವಾಡಿ ಕೇಂದ್ರದ ಪೋಷಣೆ ಅಭಿಯಾನ ಕಾರ್ಯಕ್ರಮ ಕಳತ್ತೂರು ಅಂಗನವಾಡಿಯಲ್ಲಿ ನಡೆಯಿತು. ಪೋಷಣೆ ಅಭಿಯಾನ ಕಾರ್ಯಕ್ರಮದಲ್ಲಿ ಮೊಳಕೆ ಬರಿಸಿದ ಹೆಸರುಕಾಳು ಪೌಷ್ಟಿಕ ಆಹಾರ -ತರಕಾರಿ -ಸೊಪ್ಪು ಗಳಿಂದ ಸಿಗುವಂತಹ ಪೌಷ್ಟಿಕ ಆಹಾರದ ಮಾಹಿತಿ ನೀಡಲಾಯಿತು. ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಕೂಡ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಮಾಜ ಸೇವಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಫಾರೂಕ್ ಚಂದ್ರನಗರ ಮಾತನಾಡಿ
ಕಳತ್ತೂರು ಅಂಗನವಾಡಿಯವರ ಕೆಲಸ ಶ್ಲಾಘನಿಯವಾದದ್ದು. ಇವರ ಸಮಾಜಮುಖಿ ಕೆಲಸ ದೇವರು ಮೆಚ್ಚುವಂತಹದು. ಕಾರ್ಯಕ್ರಮದ ಮುತವರ್ಜಿಯನ್ನು ಕಳತ್ತೂರು ಉಪಕೇಂದ್ರದ ಸಿ. ಎಚ್.ಓ ದೀಪಿಕಾ, ಕಿರಿಯ ಮಹಿಳಾ ಕಾರ್ಯಕರ್ತೆ ಸುಧಾವತಿ ಹಾಗೂ 3 ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಸೇರಿಕೊಂಡು ಯಶಸ್ವಿಯಾಗಿ ನಡೆಸಿದ್ದು ಊರಿನವರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಜನಾರ್ಧನ ಆಚಾರ್ಯ, ದಿವ್ಯ ಶೆಟ್ಟಿಗಾರ್, ಸ್ಟೇನ್ಲಿಸಸ್ ಕೊರ್ಡ ಹಾಗೂ ಬಾಲವಿಕಾಸ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷ, ಸದಸ್ಯರು ಮಕ್ಕಳ ತಾಯಂದಿರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
