ಪಡುಬಿದ್ರಿ : ನವರಾತ್ರಿಯ ನೆಪದಲ್ಲಿ ಮಕ್ಕಳಿಗೆ ವೇಷ ಹಾಕಿ ಭಿಕ್ಷೆ ಬೇಡಿಸುತ್ತಿರುವ ಪಾಲಕರು
Thumbnail
ಪಡುಬಿದ್ರಿ : ನವರಾತ್ರಿಯ ಸಂಭ್ರಮದಲ್ಲಿ ವೇಷಗಳದ್ದೇ ಕಾರುಬಾರು. ಆದರೆ ಪಡುಬಿದ್ರಿ ಪೇಟೆಯಲ್ಲಿ ಕಂಡ ದೃಶ್ಯ ಮಾತ್ರ ಭಿನ್ನ ಸಂಭ್ರಮದ ನಡುವೆ ಬೇಸರ ತರಿಸುವಂತಿತ್ತು. ಇದಕ್ಕೆ ಕಾರಣ ಪಾಲಕರು ಏನೂ ತಿಳಿಯದ ಮುಗ್ಧ ಮಕ್ಕಳ ಮುಖಕ್ಕೆ ಬಣ್ಣ ಬಳಿದು ಜರಿ ಜರಿ ಬಟ್ಟೆ ತೊಡಿಸಿ, ವೇಷದ ನೆಪದಲ್ಲಿ ಭಿಕ್ಷೆ ಬೇಡಿಸುತ್ತಿರುವುದು ಕಂಡು ಬಂದಿದೆ. ಇದನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತರ ಕೆಮರಾಕ್ಕೆ ಹೆದರಿದ ತಾಯಿ ಅಲ್ಲಿಂದ ವೇಗವಾಗಿ ಹೋಗುವ ದೃಶ್ಯ ಕಂಡು ಬಂದಿದೆ. ಮತೋರ್ವ ಗರ್ಭಿಣಿ ಮಹಿಳೆ ತನ್ನ ಪುಟ್ಟ ಎರಡು ಮಕ್ಕಳಿಗೆ ವೇಷ ಹಾಕಿ ಭಿಕ್ಷೆ ಬೇಡಿ ಸುತ್ತಿರುವುದು ಕಂಡು ಬಂದಿದೆ. ಸ್ಥಳೀಯರೋರ್ವರು ಇವರಿಗೆ ಗದರಿಸುತ್ತಿರುವುದು ಕಂಡುಬಂದಿದೆ. ಮಕ್ಕಳಿಗೆ ವೇಷ ಹಾಕಿ ಭಿಕ್ಷೆ ಬೇಡುತ್ತಿರುವುದು ಎಷ್ಟು ಸರಿ ಸಂಬಂಧ ಪಟ್ಟ ಇಲಾಖೆಗಳು ಎಲ್ಲಿವೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
Additional image
28 Sep 2022, 10:47 PM
Category: Kaup
Tags: