ಉಚ್ಚಿಲ : ಸಂಗೀತ ಪ್ರಿಯರ ಹೃಣ್ಮನ ಸೆಳೆದ ಶತವೀಣಾವಲ್ಲರಿ
Thumbnail
ಉಚ್ಚಿಲ : ನವರಾತ್ರಿಯ ಪುಣ್ಯಕಾಲ, ಲಲತಾ ಪಂಚಮಿಯ ಶುಭಕಾಲದಲ್ಲಿ ಶಾರದಾ ಮಾತ್ರೆಗೆ ಪ್ರಿಯವಾದ ವೀಣಾವಾದನ ಶತವೀಣಾವಲ್ಲರಿ ವಿದ್ವಾನ್ ಪವನ ಬಿ. ಆರ್.ಆಚಾರ್ ಮಣಿಪಾಲ ಇವರ ನಿರ್ದೇಶನ ಮತ್ತು ನಿರ್ವಹಣೆಯಲ್ಲಿ ಶತವೀಣಾವಲ್ಲರಿ ಶುಕ್ರವಾರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಜರಗಿತು. ಮಣಿಪಾಲ ಕಲಾ ಸ್ಪಂದನ ತಂಡದ ಜೊತೆಗೆ ಉಡುಪಿ, ಕಾರ್ಕಳ ಭಾಗದ ವೀಣಾ ವಾದಕರು ಜೊತೆಯಾದರು. ಸುಮಾರು 101 ವೀಣಾವಾದಕರು, ಜೊತೆಗೆ 14 ಸಹವಾದಕರು, 6 ಹಿನ್ನೆಲೆ ವಾದಕರು ಭಾಗಿಯಾಗಿದ್ದರು. ಸನ್ಮಾನ : ವಿದ್ವಾನ್ ಪವನ ಬಿ. ಆರ್.ಆಚಾರ್ ಮಣಿಪಾಲ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ವೀಣಾವಾದನವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
30 Sep 2022, 07:14 PM
Category: Kaup
Tags: