ಬಂಟಕಲ್ಲು : ಸಾಮರಸ್ಯ ನಡಿಗೆ, ಗಾಂಧಿ ನಮನ, ಸ್ವಚ್ಚತಾ ಕಾರ್ಯಕ್ರಮ
Thumbnail
ಬಂಟಕಲ್ಲು : ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇವರ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಎಸ್. ವಿ.ಎಸ್ ಪ.ಪೂ ಕಾಲೇಜ್ ಇನ್ನಂಜೆ, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಇವರ ಸಹಯೋಗದೊಂದಿಗೆ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಚತಾ ಕಾರ್ಯದೊಂದಿಗೆ ಗಾಂಧಿ ನಮನ ಕಾರ್ಯಕ್ರಮವು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಶಾಲೆಯಲ್ಲಿ ನಡೆಯಿತು. ಬಂಟಕಲ್ಲು ಶಾಲೆಯಿಂದ ಇಂಜಿನಿಯರಿಂಗ್ ಕಾಲೇಜಿನವರೆಗೆ ಗಾಂಧಿ ಜಯಂತಿ ಪ್ರಯುಕ್ತ ಸಾಮರಸ್ಯ ನಡಿಗೆ ನಡೆಯಿತು. ನಂತರ ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಬಳಿಯಿಂದ ಬಿ ಸಿ ರೋಡುವರೆಗೆ ರಸ್ತೆ ಇಕ್ಕಲಗಳ ಬೃಹತ್ ಸ್ವಚ್ಚತಾ ಕಾರ್ಯಕ್ರಮಕ್ಕೆ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ ಆರ್ ಪಾಟ್ಕರ್ ಚಾಲನೆ ನೀಡಿದರು. ಎನ್.ಎಸ್ ಎಸ್ ವಿದ್ಯಾರ್ಥಿಗಳು, ನಾಗರಿಕ ಸೇವಾ ಸಮಿತಿ ಸದಸ್ಯರು, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಸದಸ್ಯರು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದರು. ಸ್ವಚ್ಚತಾ ಕಾರ್ಯ ದ ಬಳಿಕ ಬಂಟಕಲ್ಲು ಶಾಲೆಯಲ್ಲಿ ಗಾಂಧಿನಮನ ಕಾರ್ಯಕ್ರಮ ಜರುಗಿತು. ಗಾಂಧಿಜಿ ಹಾಗೂ ಶಾಸ್ರ್ತಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ ಆರ್ ಪಾಟ್ಕರ್ ರವರು ಗಾಂಧಿಜಿಯವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು. ಎನ್. ಎಸ್. ಎಸ್ ಯೋಜನಾಧಿಕಾರಿ ರಾಜೇಂದ್ರ ಪ್ರಭುರವರು ಗಾಂಧಿಜಿಯವರ ತತ್ವ, ಆದರ್ಶ, ಜೀವನ ದ ಬಗ್ಗೆ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ.ಅನಿತಾ ಮೆಂಡೋನ್ಸಾ, ಜಗದೀಶ್ ಆಚಾರ್ಯ, ಉಮೇಶ್ ರಾವ್ ಶಿಕ್ಷಕ ಸತೀಶ್ ನಾಯಕ್, ಪ್ರಶಾಂತ್ ಶಾಲಾ ಶಿಕ್ಷಕಿಯರಾದ ಸೌಮ್ಯ, ಸುಮತಿ, ವಿನುತ, ಶಾಲಿನಿ,ಶ್ವೀತಾ ಮತ್ತಿತರರು ಉಪಸ್ಥಿತರಿದ್ದರು.
Additional image Additional image
02 Oct 2022, 02:07 PM
Category: Kaup
Tags: