ಉಚ್ಚಿಲದಲ್ಲಿ ಸ್ಕಾರ್ಪಿಯೋ ಚಾಲಕನ ಅವಾಂತರ 4 ವಾಹನಗಳಿಗೆ ಡಿಕ್ಕಿ
ಉಚ್ಚಿಲ : ರಾಷ್ಟ್ರೀಯ ಹೆದ್ದಾರಿ 66ರ ಅನಾಫಿ ಮಸೀದಿ ಎದುರು ಸ್ಕಾರ್ಪಿಯೋ ಚಾಲಕನ ಅತೀವೇಗ ಹಾಗೂ ನಿರ್ಲಕ್ಷತೆಯ ಚಾಲನೆಯಿಂದ ಸರಣಿ ಅಪಘಾತ ಗುರುವಾರ ರಾತ್ರಿ ಸಂಭವಿಸಿದೆ.
ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ಸ್ಕಾರ್ಪಿಯೋ ಕಾರು ಚಾಲಕ ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು, ಅಲ್ಲಿ ನಿಲ್ಲಿಸದೆ ಅತಿವೇಗದಿಂದ ಬಂದು ಉಚ್ಚಿ. ರಾ. ರಾಷ್ಟ್ರೀಯ ಹೆದ್ದಾರಿ 66ರ ಅನಾಫಿ ಮಸೀದಿಯವರು ಎರ್ಟಿಗಾ ಕಾರು ಬೈಕು ಹಾಗೂ ಮೀನಿನ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದಲ್ಲಿ ಸ್ಕಾರ್ಪಿಯೋ ಕಾರು ಗುದ್ದಿದ ರಭಸಕ್ಕೆ ಎರ್ಟಿಗಾ ಕಾರು ವಿಭಾಜಕ ಏರಿ ಇನ್ನೊಂದು ಪಥದತ್ತ ತಿರುಗಿ ನಿಂತಿದೆ.
ಸ್ಕೂಟಿ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆಸಿ ಪೂವಯ್ಯ, ಕಾಪು ಠಾಣಾಧಿಕಾರಿ ಶ್ರೀಶೈಲ ಮುರುಗೋಡ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಮತ್ತು ಸಿಬ್ಬಂದಿ ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಹೆದ್ದಾರಿಯಾಗಿ ಅಪಘಾತಕ್ಕೆ ಹೆದ್ದಾರಿ ಅರೆಬರೆ ಕಾಮಗಾರಿ ಮತ್ತು ಹೆದ್ದಾರಿಯಲ್ಲಿ ವಿದ್ಯುತ್ ಇಲ್ಲದ ಕಾರಣ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
