ಕಾಪು ಬೀಚ್ ನ ನೂತನ ಸಿಬ್ಬಂದಿ ಕಚೇರಿ ಉದ್ಘಾಟನೆ
Thumbnail
ಕಾಪು : ಇಲ್ಲಿನ ಬೀಚ್ ನಿರ್ವಹಣಾ ಸಮಿತಿ ಹಾಗೂ ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಕಾಪು ಬೀಚ್ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಬೀಚ್ ಸಿಬ್ಬಂದಿ ಕಚೇರಿಯನ್ನು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ನಿತಿನ್ ಕುಮಾರ್, ಅನಿಲ್ ಕುಮಾರ್, ನವೀನ್ ಅಮೀನ್, ಲಾಲ್ ಬಹಾದ್ದೂರ್ ಶಾಸ್ತ್ರೀ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಅಧ್ಯಕ್ಷ ಶೀಲಾರಾಜ್ ಪುತ್ರನ್, ಕಾಪು ಮೊಗವೀರ ಮಹಾಸಭಾ ಮಾಜಿ ಅಧ್ಯಕ್ಷ ಮೋಹನ್ ಬಂಗೇರ ಸ್ಥಳೀಯ ಮುಖಂಡರಾದ ಪ್ರವೀಣ್ ಪೂಜಾರಿ, ಆನಂದ್ ಶ್ರೀಯಾನ್, ಸಂತೋಷ್ ಶ್ರೀಯಾನ್, ಉದ್ಯಮಿ ಮಹಮ್ಮದ್ ಆಲಿ ಹಾಗೂ ಬೀಚ್ ಸಿಬ್ಬಂದಿಗಳು, ಸ್ಥಳೀಯರು ಉಪಸ್ಥಿತರಿದ್ದರು.
16 Oct 2022, 12:55 PM
Category: Kaup
Tags: