ಸ್ಮ್ಯಾಷರ್ಸ್ ವೆಲ್ಫೇರ್ ಆಂಡ್ ಸ್ಫೋಟ್ಸ್೯ ಕ್ಲಬ್ ಪಡುಬಿದ್ರಿ : ಅಧ್ಯಕ್ಷರಾಗಿ ರಮೀಝ್ ಹುಸೇನ್ ಪುನರಾಯ್ಕೆ
Thumbnail
ಪಡುಬಿದ್ರಿ : ರಾಜ್ಯಮಟ್ಟದ ‌ಷಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಯಶಸ್ವಿಯಾಗಿ ಆಯೋಜಿಸಿ, ಕೊರೊನಾ ಲಾಕ್ಡೌನ್ ಸಮಯದಲ್ಲಿ ಕಿಟ್ ವಿತರಣೆ, ಈದ್ ಕಿಟ್ ವಿತರಣೆ, ಸ್ವಚ್ಚತಾ ಕಾರ್ಯ, ಸಮಾಜ ಸೇವೆಯಲ್ಲಿ ತೊಡಗಿರುವ ಸ್ಮ್ಯಾಷರ್ಸ್ ವೆಲ್ಫೇರ್ ಆಂಡ್ ಸ್ಫೋಟ್ಸ್೯ ಕ್ಲಬ್ ಪಡುಬಿದ್ರಿ ಇದರ ವಾರ್ಷಿಕ ಮಹಾಸಭೆ ಮಂಗಳವಾರ ನಡೆಯಿತು. ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ರಮೀಝ್ ಹುಸೇನ್ ಪುನರಾಯ್ಕೆಯಾದರು. ಗೌರವ ಅಧ್ಯಕ್ಷರಾಗಿ ಮೊಹಮ್ಮದ್ ಕೌಸರ್, ಉಪಾಧ್ಯಕ್ಷರಾಗಿ ನಸ್ರುಲ್ಲ, ರಾಝಿ, ಅನ್ವರ್. ಕಾರ್ಯದರ್ಶಿಯಾಗಿ ನಿಝಾರ್, ಜೊತೆ ಕಾರ್ಯದರ್ಶಿಯಾಗಿ ರಾಝಿಕ್, ಕೋಶಾಧಿಕಾರಿಯಾಗಿ ಮಿಶೈಲ್, ಕ್ಲಬ್ ಕಾರ್ಯಕಾರಿ‌ ಮಂಡಳಿಯ ಸದಸ್ಯರಾಗಿ ಮುಸ್ತಾಕ್, ಅರ್ಶಾದ್, ಶಾಮಿಲ್, ಅಝ್ಮಾಲ್, ಸಲಹೆಗಾರರಾಗಿ ಅಬ್ದುಲ್ ಮುತ್ತಲಿಬ್, ಕ್ರೀಡಾ ಕಾರ್ಯದರ್ಶಿಯಾಗಿ ರಿಯಾಝ್ ಆಯ್ಕೆಯಾದರು.
18 Oct 2022, 05:17 PM
Category: Kaup
Tags: