ಇನ್ನಂಜೆ : ದಿವಂಗತ ಕೆ. ಸದಾನಂದ ಶೆಟ್ಟಿ - ನುಡಿನಮನ, ಸಂಸ್ಮರಣೆ
Thumbnail
ಕಾಪು : ಯಸ್. ವಿ.ಯಚ್ ವಿದ್ಯಾಸಂಸ್ಥೆಯ ಸಂಚಾಲಕರಾಗಿದ್ದ, ಶಿಕ್ಷಣ ಪ್ರೇಮಿ ಸಮಾಜಸೇವಕ ಮಂಡೇಡಿ ಹೊಸಮನೆ ದಿವಂಗತ ಕೆ. ಸದಾನಂದ ಶೆಟ್ಟಿ ಅವರಿಗೆ ನುಡಿ ನಮನ ಹಾಗೂ ಸಂಸ್ಮರಣಾ ಕಾರ್ಯಕ್ರಮವು ಶಾಲೆಯ ಹಯವದನ ಸಭಾ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು. ಆಡಳಿತಾಧಿಕಾರಿ ಅನಂತ ಮೂಡಿತ್ತಾಯ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚ, ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಶೆಟ್ಟಿ ನುಡಿ ನಮನ ಸಮರ್ಪಿಸಿದರು. ವೇದಿಕೆಯಲ್ಲಿ ದಿವಂಗತ ಕೆ.ಸದಾನಂದ ಶೆಟ್ಟಿ ಅವರ ಸಹೋದರರಾದ ಕೆ. ರಮಾನಂದ ಶೆಟ್ಟಿ ಮತ್ತು ಕೆ.ದಯಾನಂದ ಶೆಟ್ಟಿ, ಅಳಿಯಂದಿರಾದ ಬಾಲಕೃಷ್ಣ ಶೆಟ್ಟಿ ಮತ್ತು ವಿಜಯ ಶೆಟ್ಟಿ, ಇನ್ನಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ.ಶೆಟ್ಟಿ ಮಂಡೇಡಿ, ನಿರ್ದೇಶಕರಾದ ಶಿವರಾಮ ಶೆಟ್ಟಿ ಮಂಡೇಡಿ , ಎಸ್. ವಿ. ಎಚ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ನಟರಾಜ ಉಪಾಧ್ಯಯ, ಮುಖ್ಯ ಶಿಕ್ಷಕರಾದ ಸುಷ್ಮಾ, ಮಮತಾ ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಪಾಂಗಾಳ ವಿದ್ಯಾವರ್ಧಕ ಶಾಲೆ, ಪಾಂಗಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಇನ್ನಂಜೆ ಶಾಲಾ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಿಹಿತಿಂಡಿಗಳನ್ನು ವಿತರಿಸಲಾಯಿತು.
Additional image
18 Oct 2022, 08:16 PM
Category: Kaup
Tags: