ಕಟಪಾಡಿ : ಏಣಗುಡ್ಡೆಯಲ್ಲಿ ಮುಳ್ಳಮುಟ್ಟೆ ಆಚರಣೆ
Thumbnail
ಕಟಪಾಡಿ : ಕಾಪು ತಾಲೂಕಿನ ಕಟಪಾಡಿಯ ಏಣಗುಡ್ಡೆಯ ನೀಚ ದೈವಸ್ಥಾನದ ಬಳಿ ದೀಪಾವಳಿಯಂದು ಪ್ರಾತ: ಕಾಲ ಮುಳ್ಳಮುಟ್ಟೆ ಸುಡುವ ಕಾರ್ಯಕ್ರಮ ಜರಗಿತು. ಈ ಸಂದರ್ಭ ಮಾತನಾಡಿದ ಹಿರಿಯರಾದ ಕಟಪಾಡಿ ಶಂಕರ ಪೂಜಾರಿ ನಮ್ಮ ಪೂರ್ವಜರ ಕಾಲದಿಂದಲೂ ದೀಪಾವಳಿಯಂದು ಪ್ರಾತಃಕಾಲದಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿದ್ದ ಮುಳ್ಳಮುಟ್ಟೆ ಸುಡುವ ಆಚರಣೆ ಇಂದಿಗೂ ಪ್ರಸ್ತುತ. ತುಳುನಾಡಿನ ಹಬ್ಬಗಳು, ಆಚರಣಾ ಪದ್ಧತಿ, ಕಟ್ಟು ಕಟ್ಟಳೆಗಳು, ಸಂಪ್ರದಾಯಗಳು, ನಂಬಿಕೆ ನಡವಳಿಕೆಗಳ ಗಟ್ಟಿತನ ಇಂದಿಗೂ ಪ್ರಸ್ತುತ ಎಂದು ಹೇಳಿದರು. ಈ ಸಂದರ್ಭ ದೈವಸ್ಥಾನದ ಮುಖ್ಯಸ್ಥರಾದ ಆನಂದ ಮಾಬಿಯಾನ್, ಕೂಡುಕಟ್ಟಿನ ಗುರಿಕಾರರಾದ ದಾಮೋದರ ಪೂಜಾರಿ, ಸೂರಪ್ಪ ಕುಂದರ್, ಜಯ ಪೂಜಾರಿ, ವಿನೋಧ ಪೂಜಾರಿ, ಅರ್ಚಕ ರಮೇಶ್ ಕೋಟ್ಯಾನ್ ಪ್ರಮುಖರಾದ ಮಂಜುನಾಥ, ರಾಜೇಂದ್ರ ಆಚಾರ್ಯ, ಸಿದ್ಧಾಂತ್, ರಜತ್, ವಿಘ್ನೇಶ್, ಕಿಶೋರ್ ಮೊದಲಾದವರು ಉಪಸ್ಥಿತರಿದ್ದರು.
24 Oct 2022, 03:27 PM
Category: Kaup
Tags: